2020 ರೈತ ಕಾಯ್ದೆ ವಿರೋಧಿಸಿ ಕೂಡ್ಲಿಗಿ ರೈತ ಸಂಘಟನೆಯಿಂದ ಹೆದ್ದಾರಿ ಬಂದ್

ಕೂಡ್ಲಿಗಿ, ಫೆ. 7- ರೈತರ, ಕಾರ್ಮಿಕರ, ಎಪಿಎಂಸಿ  ಭೂ ಸುಧಾರಣಾ ವಿದ್ಯುತ್ ಸೇರಿದಂತೆ ಇತರೆ 2020ರ ತಿದ್ದುಪಡಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂಬ ನಿಟ್ಟಿನಲ್ಲಿ ದೆಹಲಿ ಗಡಿಭಾಗದಲ್ಲಿ ರೈತರ ಪ್ರತಿಭಟನೆ ಬೆಂಬಲಿಸಿ, ಕೂಡ್ಲಿಗಿಯಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ, ಸಿಐಟಿಯು ಮತ್ತು ಕಾಂಗ್ರೆಸ್ ಕಾರ್ಯಕರ್ತರಿಂದ ಕೂಡ್ಲಿಗಿ ಹೊರ ವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಯಿತು.

ಪಟ್ಟಣದ ಮಹಾತ್ಮ ಗಾಂಧೀಜಿ ಪವಿತ್ರ ಚಿತಾಭಸ್ಮ ಹುತಾತ್ಮರ ಸ್ಮಾರಕದಿಂದ ಹೊರಟ ರೈತ ಸಂಘದ ಪ್ರತಿಭಟನೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಮದಕರಿ ವೃತ್ತದ ಮೂಲಕ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಕೇಂದ್ರ ಸರ್ಕಾರದ ನಡೆ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟಿಸಲಾಯಿತು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ದೇವರಮನಿ ಮಹೇಶ್, ಕಲ್ಲಪ್ಪ, ಚನ್ನಪ್ಪ, ಓಬ ಳೇಶ, ಸಿಐಟಿಯು ನ ಕಾರ್ಮಿಕ ಮುಖಂಡ ವಿರು ಪಾಕ್ಷಿ ವಕೀಲರು, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಗುರು ಸಿದ್ದನಗೌಡ್ರು, ಮಹಿಳಾ ರಾಜ್ಯ ಕಾರ್ಯದರ್ಶಿ ಜಿಂಕಲ್ ನಾಗಮಣಿ, ಬಳ್ಳಾರಿ ಜಿಲ್ಲಾ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಬಳ್ಳಾರಿ ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ಮಂಜು (ಮಯೂರ), ಕಂಪ್ಯೂಟರ್ ರಾಘವೇಂದ್ರ, ಕಾಂಗ್ರೆಸ್ ಕಾರ್ಯ ಕರ್ತರು  ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!