ಕೋವಿಡ್ : ಆರೋಗ್ಯ ಇಲಾಖೆ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ

ಹರಪನಹಳ್ಳಿ ಎಸಿ ಹೆಚ್.ಜಿ. ಚಂದ್ರಶೇಖರಯ್ಯ

ಹರಪನಹಳ್ಳಿ, ಜು.1  ಬೆಂಬಿಡದೆ ಕಾಡುತ್ತಿರುವ ಕೋವಿಡ್ ನಿಯಂತ್ರಿಸಲು ಅವಿರತವಾಗಿ ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್‌ಗಳಾದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಡಿ ದರ್ಜೆ ನೌಕರರಿಗೆ ಆಹಾರ ಕಿಟ್ ವಿತರಣೆ ಮಾಡಿರುವುದು ಸ್ಮರಣೀಯ ಎಂದು ಉಪವಿಭಾಗಾಧಿಕಾರಿ ಹೆಚ್.ಜಿ. ಚಂದ್ರಶೇಖರಯ್ಯ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಗರ ಮನೋರಂಜನಾ ಕೇಂದ್ರದ ವತಿಯಿಂದ ಕೋವಿಡ್ 19 ಸಾಂಕ್ರಾಮಿಕ ರೋಗ ನಿವಾರಣೆಗಾಗಿ ಸೇವೆ ಸಲ್ಲಿಸಿದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಡಿ ದರ್ಜೆ ನೌಕರರಿಗೆ ಆಹಾರ ಕಿಟ್ ವಿತರಿಸಿದ ಬಳಿಕ ಅವರು ಮಾತನಾಡಿದರು.

 ಸಿಪಿಐ ನಾಗರಾಜ್ ಎಂ. ಕಮ್ಮಾರ್,  ನಗರ ಮನೋರಂಜನಾ ಕೇಂದ್ರದ ಅಧ್ಯಕ್ಷ ಗಂಗಾಧರ ಗುರುಮಠ್ ಮಾತನಾಡಿದರು.

ತಾಲ್ಲೂಕು ವೈದ್ಯಾಧಿಕಾರಿ ಪಿ.ಕೆ. ವೆಂಕಟೇಶ್, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಿವಕುಮಾರ್, ಪಿಎಸ್‌ಐ ಸಿ. ಪ್ರಕಾಶ್, ನಗರ ಮನೋರಂಜನಾ ಕೇಂದ್ರದ ಕಾರ್ಯದರ್ಶಿ ಕಾನಹಳ್ಳಿ ರುದ್ರಪ್ಪ,  ಕಾರ್ಯ ಕಾರಿ ಮಂಡಳಿಯ ಸದಸ್ಯರುಗಳಾದ ಎಂ. ರಾಜಶೇಖರ್, ಐಗೋಳ್ ಚಿದಾನಂದಪ್ಪ, ಶಶಿಧರ್ ಪೂಜಾರ್, ರಾಜು ರೆಡ್ಡಿ, ಸದಸ್ಯ ಡಿ. ಶಫಿ, ಇ. ದುರುಗಪ್ಪ, ಎಸ್.ಆರ್. ತಿಮ್ಮಣ್ಣ, ಬಿ. ಮಾಧವರಾವ್, ಬಿ. ರಾಮ್ ಪ್ರಸಾದ್ ಗಾಂಧಿ, ಬಸಣ್ಣ, ಪಿ. ವೀರೇಶ್ ಗೌಡ, ವೆಂಕಟೇಶ್ ಬಾಗಲಾರ್ ಇದ್ದರು.

error: Content is protected !!