ಮಲೇಬೆನ್ನೂರಿನಲ್ಲಿ ಮಂಡಲ ಪೂಜೆ, ಕಲ್ಯಾಣೋತ್ಸವ

ಮಲೇಬೆನ್ನೂರು, ಜು.1 – ಪಟ್ಟಣದ ಹೊರವಲಯದಲ್ಲಿರುವ ಶ್ರೀ ವೀರಭದ್ರೇಶ್ವರ, ಶ್ರೀ ಮಹಾಗಣಪತಿ, ಶ್ರಿ ಭದ್ರಕಾಳಿ, ಶ್ರೀ ಕಾಲಭೈರವ, ಶ್ರೀ ನಾಗಪರಿವಾರದ ದೇವಸ್ಥಾನವು ಲೋಕಾರ್ಪಣೆಗೊಂಡು 48 ದಿನಗಳಾದ ಹಿನ್ನೆಲೆಯಲ್ಲಿ ಗುರುವಾರ ಮಂಡಲ ಪೂಜೆ, ನವಗ್ರಹ, ಮೃತ್ಯುಂಜಯ ಹೋಮ, ರುದ್ರಯಾಗ ಮತ್ತು ಶಿವ-ಪಾರ್ವತಿಯರ ಗಿರಿಜಾ ಕಲ್ಯಾಣೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಣ್ವಕುಪ್ಪೆ ಗವಿಮಠದ ಶ್ರಿ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಜರುಗಿದ ಕಲ್ಯಾಣೋತ್ಸವದಲ್ಲಿ ಮಾಜಿ ಶಾಸಕ ಹೆಚ್‍.ಎಸ್‍, ಶಿವಶಂಕರ್‍, ದೇವಸ್ಥಾನ ಟ್ರಸ್ಟ್‍ ಕಮಿಟಿ ಅಧ್ಯಕ್ಷ ಬಿ ಪಂಚಪ್ಪ, ಉಪಾಧ್ಯಕ್ಷ ಬಿ.ಚಿದಾನಂದಪ್ಪ, ಬಿ.ಮಲ್ಲಿಕಾರ್ಜುನ್‍, ಬಿ.ಉಮಾಶಂಕರ್‍, ಬಿ.ನಾಗೇಶ್‍, ಬಿ.ಶಂಭುಲಿಂಗಪ್ಪ, ಬಿ.ವಿ.ರುದ್ರೇಶ್, ಬಿ.ಎನ್‍. ವೀರೇಶ್‍, ಹೆಚ್‌.ಸಿ.ವಿಜಯ್‍ಶಂಕರ್‍, ಬಟ್ಟೆ ಅಂಗಡಿ ವಿಶ್ವನಾಥ್‍, ಹೊಸಳ್ಳಿ ಕರಿಬಸಪ್ಪ, ವರ್ತಕ ಹೆಚ್‍.ಎಸ್‍. ವೀರಭದ್ರಯ್ಯ, ಪಿಎಸ್‍ಐ ವೀರಬಸಪ್ಪ ಸೇರಿದಂತೆ, ಇನ್ನೂ ಅನೇಕರು ಭಾಗವಹಿಸಿದ್ದರು.

ಬೆನಕಯ್ಯ ಶಾಸ್ತ್ರಿ, ಚಂದ್ರಶೇಖರ್‍ ಶಾಸ್ತ್ರಿ, ನಾಗೇಶ್‍ ಶಾಸ್ತ್ರಿ, ಚನ್ನೇಶ್‍ ಶಾಸ್ತ್ರಿ, ಭೂದೇಶ್ ಶಾಸ್ತ್ರಿ ಇವರುಗಳ ನೇತೃತ್ವದಲ್ಲಿ ಪೂಜೆ, ಹೋಮ, ಯಾಗ, ಕಲ್ಯಾಣೋತ್ಸವ ನಡೆದವು.

error: Content is protected !!