ರಾಣೇಬೆನ್ನೂರು, ಏ. 6- ನಗರದ ವಿವೇಕಾನಂದ ಗ್ರಾಮೀಣ ವಿದ್ಯಾಸಂಸ್ಥೆ ಅಧ್ಯಕ್ಷರು ಮತ್ತು ಹಾವೇರಿ ಜಿಲ್ಲೆಯ ಸಾವಿತ್ರ ಬಾ ಪುಲೆ ಎಂದೇ ಹೆಸರಾದ ಶಿಕ್ಷಣ ಪ್ರೇಮಿ, ಪಿಂಚಣಿ ಹಣದಲ್ಲಿ ಭುವನೇಶ್ವರಿ ಆದರ್ಶ ಹಿರಿಯ ಪ್ರಾಥಮಿಕ ಶಾಲೆ ಸ್ಥಾಪಿಸಿ ಬಡ ವಿದ್ಯಾರ್ಥಿಗಳ ಪಾಲಿಗೆ ಬೆಳಕಾದ ಪುಟ್ಟಮ್ಮ ಬಸಯ್ಯ ಹಿರೇಮಠ ಅವರ ಹುಟ್ಟಿದ ಹಬ್ಬ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಚೇತನ್ ಪೂಜಾರ್, ಅನೂಪ್ ನಾಗರಾಜ ಪೂಜಾರ್, ದುಷ್ಯಂತ್ ದ್ಯಾಮಕ್ಕನವರ್, ಮುಖ್ಯೋಪಾಧ್ಯಾಯರಾದ ಮಲ್ಲಿಕಾರ್ಜುನ ಬಾವಿಕಟ್ಟಿ, ಸಹ ಶಿಕ್ಷಕರುಗಳಾದ ಶಿವಯ್ಯ ಹಿರೇಮಠ, ರೇಖಾ.ಸಿ, ರೇಣುಕಮ್ಮ ಎಸ್, ದೇವರಾಜ ಮಲ್ಲಾಪುರ ಮತ್ತು ಅಡುಗೆ ಸಿಬ್ಬಂದಿಗಳಾದ ಯಶೋದಾ ಚಕ್ರಸಾಲಿ, ಅನಸೂಯಮ್ಮ ಹಾಲಮ್ಮನವರ, ಗೀತಾ ಗೋಣೆಪ್ಪನವರ ಉಪಸ್ಥಿತರಿದ್ದರು.