ಉತ್ತಮ ಬಾಂಧವ್ಯ ರೂಢಿಸಿಕೊಂಡರೆ ರೌಡಿ ಪಟ್ಟದಿಂದ ವಿಮುಕ್ತಿ: ಕುಮಾರ್

ಹರಪನಹಳ್ಳಿ: ಗೂಂಡಾ ಪ್ರಕರಣಗಳಲ್ಲಿ ದಾಖಲಾಗಿರುವ ವ್ಯಕ್ತಿಗಳಿಗೆ ಸಿಪಿಐ ಕಿವಿಮಾತು

ಹರಪನಹಳ್ಳಿ, ಫೆ.2-  ನಡವಳಿಕೆ ತಿದ್ದಿಕೊಂಡು ಒಳ್ಳೆಯ ರೀತಿಯಲ್ಲಿ ಜೀವನ ಸಾಗಿಸಿ, ಸಾರ್ವಜನಿಕ ರೊಂದಿಗೆ ಉತ್ತಮ ಬಾಂಧವ್ಯ ರೂಢಿ ಸಿಕೊಂಡರೆ ರೌಡಿಸಂ ಪಟ್ಟದಿಂದ ವಿಮುಕ್ತಿಗೊಳ್ಳಬಹುದು ಎಂದು ಸಿಪಿಐ ಕೆ. ಕುಮಾರ ಕಿವಿಮಾತು ಹೇಳಿದರು.

ಪಟ್ಟಣದ ಸರ್ಕಾರಿ ಜ್ಯೂನಿ ಯರ್ ಕಾಲೇಜ್ ಆವರಣದಲ್ಲಿ ತಾಲ್ಲೂಕಿನ ನಾಲ್ಕು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಗೂಂಡಾ ಅಥವಾ ರೌಡಿಸಂ ಕಾಯ್ದೆಯಡಿ ಪ್ರಕರಣಗಳಲ್ಲಿ ದಾಖಲಾಗಿರುವ ವ್ಯಕ್ತಿಗಳೊಂದಿಗೆ ಸಮಾಲೋಚನೆ ನಡೆಸಿದರು. 

ರೌಡಿ ಎನ್ನುವ ಹಣೆಪಟ್ಟಿ ಇರುವ ವರೆಗೂ ನಿಮ್ಮ ಬದುಕು ಸುಖಮಯ ವಾಗಿರುವುದಿಲ್ಲ. ರಾತ್ರಿ, ಹಗಲು ಎನ್ನದೇ ಪೊಲೀಸರು ನಿಮ್ಮ ಮನೆಯ ಬಾಗಿಲನ್ನು ತಟ್ಟುತ್ತಾರೆ. ಇದರಿಂದ ನಿಮಗೆ, ಅಕ್ಕಪಕ್ಕದ ಮನೆಯವರಿಗೆ ಹಾಗೂ ಸಂಬಂಧಿಕರಿಗೂ ಇರುಸು ಮುರುಸಾಗುತ್ತದೆ. ಸಮಾಜದಲ್ಲಿ ಗೌರವ ಕಡಿಮೆಯಾಗುತ್ತದೆ. ಇದ ರಿಂದ ಹೊರಬರಲು ಒಳ್ಳೆಯ ನಡತೆಯನ್ನು ಮೈಗೂಡಿಸಿಕೊಳ್ಳ ಬೇಕು. ಪೊಲೀಸರು ನಿಮ್ಮ ನಡತೆಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ರೌಡಿ ಪಟ್ಟಿಯಿಂದ ಬಿಡುಗಡೆ ಮಾಡಲಿದ್ದಾರೆ ಎಂದರು. 

ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಆದೇಶದಂತೆ ರೌಡಿ ಶೀಟರ್‍ಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. 15 ವರ್ಷಕ್ಕಿಂತ ಮೇಲ್ಪಟ್ಟ ಪ್ರಕರಣಗಳ ಆರೋಪಿಗಳ ಸನ್ನಡತೆಯನ್ನು ಪರಿಶೀಲಿಸಿ ಹಾಗೂ ಸಮಾಜದಲ್ಲಿ ಅವರ ನಡವಳಿಕೆ ಗುರುತಿಸಿ ನ್ಯಾಯಾಲಯದಲ್ಲಿದ್ದ ಪ್ರಕರಣಗಳಿಂದ ಬಿಡುಗಡೆಗೊಂಡಿರುವ ಬಗ್ಗೆ ಖಾತ್ರಿ ಮಾಡಿಕೊಂಡು ಗೂಂಡಾ ಪಟ್ಟಿಯಿಂದ ಅಂತಹವರ ಹೆಸರುಗಳನ್ನು ಕೈಬಿಡಲಾಗುವುದು ಎಂದರು.

ಹರಪನಹಳ್ಳಿ ಪೊಲೀಸ್ ಠಾಣೆಯ ಪಿಎಸ್‍ಐ ಪ್ರಕಾಶ, ಚಿಗಟೇರಿ ಠಾಣೆ ನಾಗರಾಜ, ಅರಸಿಕೆರೆ ಠಾಣೆ ನಾಗರತ್ನ, ಸಿಬ್ಬಂದಿಗಳಾದ ಕೊಟ್ರೇಶ್, ನಾಗರಾಜ, ರವಿಕುಮಾರ. ಗುರುರಾಜ ಇನ್ನಿತರರು ಹಾಜರಿದ್ದರು.

error: Content is protected !!