ಕೇಂದ್ರ ಸರ್ಕಾರವು ಈ ವರ್ಷವೂ ಯಥಾ ಪ್ರಕಾರ ವಾಸ್ತವಿಕತೆಯಿಂದ ದೂರವಿರುವ ಕಾಲ್ಪನಿಕವಾದ ಬಜೆಟ್ಟನ್ನು ದೇಶದ ಜನರಿಗೆ ನೀಡಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದ ನಲುಗಿರುವ ದೇಶಕ್ಕೆ ಮತ್ತು ದೇಶವಾಸಿಗಳಿಗೆ ಈ ಬಾರಿಯಾದರೂ ಅತ್ಯಂತ ಜನಪ್ರಿ ಯವಾದ ಕೊಡುಗೆ ಗಳನ್ನು ನೀಡುವುದರ ಮೂಲಕ ಅವರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ಪ್ರಯತ್ನಿಸ ಬಹುದಿತ್ತು. ಆದರೆ ರೈತರು, ಕಾರ್ಮಿ ಕರು ಹಾಗೂ ಜನಸಾಮಾನ್ಯರೆಡೆಗೆ ಅತ್ಯಂತ ಸಂವೇದನಾರಹಿ ತವಾದ ಸರಕಾರದ ಧೋರಣೆ ಮುಂದುವರೆದಿದೆ.
ಕೋಟ್ಯಾಂತರ ಸಂಖ್ಯೆಯಲ್ಲಿ ಉದ್ಯೋಗಗಳು ನಾಶವಾಗಿವೆ. ವಿದ್ಯಾವಂತ ಯುವಕರು ಬೀದಿಗೆ ಬಿದ್ದಿದ್ದಾರೆ. ಆದರೆ ಉದ್ಯೋಗ ಸೃಷ್ಠಿಗಾಗಿ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೆಂಬಂತೆ ಕೆಲವೇ ಕೆಲವು ಸಣ್ಣಪುಟ್ಟ ಘೋಷಣೆಗಳನ್ನು ಹೊರತುಪಡಿಸಿದರೆ,
ಅತ್ಯಗತ್ಯವಾದ ಯಾವುದೇ ದೊಡ್ಡ ಯೋಜನೆಗಳನ್ನು ಪ್ರಕಟಿಸದಿರುವುದು ಅತ್ಯಂತ ದೊಡ್ಡ ಸಂಖ್ಯೆಯಲ್ಲಿರುವ ಯುವ ಸಮುದಾಯಕ್ಕೆ ಅನ್ಯಾಯವಾಗಿದೆ.
ವಿಮಾ ಕ್ಷೇತ್ರಕ್ಕೆ ಶೇ. 74 ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ಕಲ್ಪಿಸಿ ರುವುದು, ಜೀವ ವಿಮಾ ನಿಗಮದ ಷೇರು ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖಾಸಗಿ ಯವರಿಗೆ ಮಾರುವ ಪ್ರಸ್ತಾಪ ಸರಿಯಿಲ್ಲ. ಹಾಗೆಯೇ 2 ಸರಕಾರಿ ಸ್ವಾಮ್ಯದ ಬ್ಯಾಂಕುಗಳು, 1 ಸಾಮಾನ್ಯ ವಿಮಾ ಸಂಸ್ಥೆಯನ್ನು ಖಾಸಗಿಕರಣ ಗೊಳಿಸುವುದು ಅತ್ಯಂತ ದೇಶ ವಿರೋಧಿ ಕ್ರಮವಾಗಿದೆ. ಇವೆಲ್ಲವುಗಳನ್ನು ಹಣಕಾಸು ಸಚಿವರು ಮರು ಪರಿಶೀಲನೆ ಮಾಡಬೇಕು. ಇಲ್ಲದಿದ್ದಲ್ಲಿ ಈ ಸರಕಾರ ರಾಷ್ಟ್ರೀಕರಣ ನೀತಿಯ ವಿರುದ್ಧವಿರುವುದು ಸ್ಪಷ್ಟವಾಗುತ್ತದೆ. ಸರಕಾರದ ಈ ಕೆಟ್ಟ ನೀತಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಜನಾಂದೋಲನವನ್ನು ರೂಪಿಸಲಿದೆ.
– ಕೆ.ರಾಘವೇಂದ್ರ ನಾಯರಿ, ಬ್ಯಾಂಕ್ ಉದ್ಯೋಗಿಗಳ ಸಂಘದ ಮುಖಂಡರು. ಮೊ: 9844314543