ದಾವಣಗೆರೆ, ಫೆ.2- ಸಮೀಪದ ಹೆಬ್ಬಾಳು ಬಳಿ ವಿಮಾನ ನಿಲ್ದಾಣಕ್ಕಾಗಿ ಕೇಂದ್ರದಿಂದ ಮಂಜೂರಾತಿ ಮಾಡಿಸಿಕೊಡುವಂತೆ ದಾವಣಗೆರೆ ಎರಡನೇ ರಾಜಧಾನಿ ಹೋರಾಟ ಸಮಿತಿ ಈ ಹಿಂದೆ ಕೇಂದ್ರ ವಿಮಾನಯಾನ ಖಾತೆ ಸಚಿವರಾಗಿದ್ದ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಮನವಿ ಮಾಡಿದ್ದು, ಸಂಸದರು ಆಗುವುದಿಲ್ಲ ಎಂದು ಖಾರವಾಗಿಯೇ ತಿಳಿಸಿದ್ದರು.
ವಿಪರ್ಯಾಸವೆಂದರೆ ಉತ್ತರ ಪ್ರದೇಶದಲ್ಲಿ ಈಗಾಗಲೇ 18 ವಿಮಾನ ನಿಲ್ದಾಣಗಳಾಗಿದ್ದು, ಸೇವೆ ನೀಡುತ್ತಾ ಬಂದಿವೆ ಹಾಗೂ 9 ನಿಲ್ದಾಣಗಳ ಕಾರ್ಯವು ತ್ವರಿತವಾಗಿ ನಡೆಯುತ್ತಿದೆ. ನಮ್ಮಲ್ಲಿ ವಿಮಾನ ನಿಲ್ದಾಣ ಆಗದಿರುವುದಕ್ಕೆ ಕಾರಣವೇನೆಂದು ಸಂಸದರು ಉತ್ತರ ನೀಡಲಿ. ಇಲ್ಲವಾದಲ್ಲಿ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ ಆಗ್ರಹಿಸಿದ್ದಾರೆ.
ಸಮಿತಿಯ ಪದಾಧಿಕಾರಿಗಳಾದ ಕಳಸಪ್ಳ ಚನ್ನಬಸಪ್ಪ, ಚಂದ್ರಶೇಖರ ದಾನಪ್ಪ, ಎಂ. ಪ್ರೇಮಲತಾ, ಪೂಜಾರ್ ರಾಜೇಂದ್ರ ಬಂಗೇರಾ, ಎಲ್.ಎಸ್. ಹೇಮಾವತಿ ಇನ್ನಿತರರು ಆಗ್ರಹಿಸಿದ್ದಾರೆ.