ದಾವಣಗೆರೆ,ಫೆ.2- ಕೇಂದ್ರ ಹಣಕಾಸು ಖಾತೆ ಸಚಿವೆ ಶ್ರೀಮತಿ ನಿರ್ಮಲಾ ಸೀತಾ ರಾಮನ್ ಅವರು ನಿನ್ನೆ ಮಂಡಿಸಿದ ಆಯ-ವ್ಯಯ ಉತ್ತಮವಾಗಿದೆ ಎಂದು ನಗರದ ಹಿರಿಯ ಕೈಗಾರಿಕೋದ್ಯಮಿಯೂ ಆಗಿರುವ ಲೆಕ್ಕಪರಿ ಶೋಧಕ ಅಥಣಿ ವೀರಣ್ಣ ಪ್ರತಿಕ್ರಿಯಿಸಿದ್ದಾರೆ.
ತೆರಿಗೆ ಪಾವತಿ ಪ್ರಕ್ರಿಯೆಯನ್ನು ಸರಳೀಕರಣಗೊಳಿ ಸಿದ್ದು, ಹೊಸ ತೆರಿಗೆ ವಿಧಿಸಿಲ್ಲ. ಆದಾಯ ತೆರಿಗೆಯಲ್ಲಿ ಹೆಚ್ಚುವರಿ ಹೊರೆ ಹಾಕಿಲ್ಲ. ಜಿ.ಎಸ್.ಟಿ ತೆರಿಗೆ, ರಿಟರ್ನ್ ಸಲ್ಲಿಕೆಯಲ್ಲಿ ಹಿರಿಯ ನಾಗರಿಕರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.
ಆದಾಯ ತೆರಿಗೆದಾರರಿಗೆ ಅಗತ್ಯಬಿದ್ದರೆ ಹಿಂದಿನ ಲೆಕ್ಕ ಪತ್ರ ಪರಿಶೀಲಿಸುವ ಹೊಸ ನಿಯಮ ಜಾರಿಗೆ ತಂದಿರುವುದು ಉತ್ತಮ ಕ್ರಮವಾಗಿದೆ. ಅಸೆಸ್‌ಮೆಂಟ್ ವ್ಯತ್ಯಾಸವಾದಾಗ ಆದಾಯ ತೆರಿಗೆ ಇಲಾಖೆ ನಮ್ಮ ನಡುವೆ ತಕರಾರಿದ್ದಲ್ಲಿ ಡಿಸ್ಪ್ಯೂಟ್ ರೆಸುಲೇಷನ್ ಸಮಿತಿಗೆ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಲು ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ ಎಂದು ಅವರು ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕರ್ನಾಟಕಕ್ಕೆ ತಾರತಮ್ಯ ಮಾಡಲಾಗಿದೆ. ಕರ್ನಾಟಕಕ್ಕೆ ಮೆಟ್ರೋಗೆ 2ಎ, 2ಬಿ ಯೋಜನೆಗೆ ಹಣ ನೀಡಿದ್ದು ಬಿಟ್ಟರೆ ಯಾವುದೇ ಅನುದಾನ ನೀಡಿಲ್ಲ ಎಂದು ವೀರಣ್ಣ ಅವರು ಹೇಳಿದ್ದಾರೆ.