ಹಿಂದಿನ ಬಜೆಟ್‌ಗಿಂತ ರೈತರಿಗೆ ಶೇ. 1.5 ರಷ್ಟು ಅನುಕೂಲಕರ

ಹಿಂದಿನ ಬಜೆಟ್‌ಗಿಂತ ರೈತರಿಗೆ ಶೇ. 1.5 ರಷ್ಟು ಅನುಕೂಲಕರ - Janathavaniದಾವಣಗೆರೆ,ಫೆ.1- ನಗರದ ಬಾಪೂಜಿ ಎಂಬಿಎ ಕಾಲೇಜಿನಲ್ಲಿ ಇಂದು ನಡೆದ ಕೇಂದ್ರ ಸರ್ಕಾರದ ಬಜೆಟ್‌ 2021-22 ರ ನೇರ ಪ್ರಸಾರವನ್ನು ಎಂಬಿಎ, ಬಿ.ಕಾಂ. ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿತ್ತು. 

ನಡೆದ ಅಧಿವೇಶನವನ್ನು ವಿದ್ಯಾರ್ಥಿಗಳು ಉತ್ಸುಕರಾಗಿ ವೀಕ್ಷಿಸಿದರು. ಬಜೆಟ್‌ ಬಗೆಗಿನ ವಿಚಾರಗಳನ್ನು ಫಲಕ ಚರ್ಚೆಯ ಮೂಲಕ ಬಾಪೂಜಿ ಎಂಬಿಎ ಕಾಲೇಜು ಅಧ್ಯಕ್ಷ ಅಥಣಿ ಎಸ್‌. ವೀರಣ್ಣ, ತರಳಬಾಳು ಕೃಷಿ ವಿಜ್ಞಾನಿ ಬಸವನಗೌಡ, ಚಾರ್ಟರ್ಡ್‌ ಅಕೌಂಟೆಂಟ್ ಮುಂಡಾಸ್‌ ವೀರೇಂದ್ರ,  ಬಾಪೂಜಿ ಎಂಬಿಎ ಕಾಲೇಜು ನಿರ್ದೇಶಕ ಸ್ವಾಮಿ ತ್ರಿಭುವಾನಂದ ಉಪಸ್ಥಿತಿಯಲ್ಲಿ ನಡೆಯಿತು.

ಬಜೆಟ್‌ ವಿಶ್ಲೇಷಿಸಿದ ಹಿರಿಯ ಕೈಗಾರಿಕೋ ದ್ಯಮಿ ಅಥಣಿ ವೀರಣ್ಣ,   ಹಿಂದಿನ ಬಜೆಟ್‌ಗಿಂತ ರೈತರಿಗೆ ಶೇ. 1.5 ರಷ್ಟು ಅನುಕೂಲಕರವಾಗಿದೆ ಎಂದು ತಿಳಿಸಿದರು. ಪೆಟ್ರೋಲ್, ಡೀಸೆಲ್‌ ದರ ಮಾತ್ರ 100ರ ಸನ್ನಿಹಿತವಾಗಿರುವುದು ವಿಷಾದನೀಯ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ಕೂಡ ಬಜೆಟ್‌ ಬಗೆಗಿನ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಬಿ.ಐ.ಹೆಚ್‌.ಇ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ವೀರಪ್ಪ ಪಾಲ್ಗೊಂಡಿದ್ದರು.

 

error: Content is protected !!