ದಾವಣಗೆರೆ, ಜ.30- ಇಂದಿನ ದಿನಗಳಲ್ಲಿ ಮೂತ್ರಪಿಂಡ (ಕಿಡ್ನಿ) ಕಾಯಿಲೆಯಿಂದ ತೊಂದರೆ ಅನುಭವಿಸು ತ್ತಿರುವ ಅನೇಕ ಬಡ ರೋಗಿಗಳ ಅನು ಕೂಲಕ್ಕಾಗಿ ಈ ಭಾಗದಲ್ಲಿ ಡಯಾಲಿಸಿಸ್ ಕೇಂದ್ರ ಉದ್ಘಾಟನೆ ಮಾಡಲಾಗಿದೆ. ಬಡವ – ಶ್ರೀಮಂತ ಎನ್ನದೆ ಸರ್ವರೂ ಇದರ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಎಸ್.ಎಸ್. ಕೇರ್ ಟ್ರಸ್ಟಿನ ಅಧ್ಯಕ್ಷರೂ ಆಗಿರುವ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಸಾರ್ವಜನಿಕರಿಗೆ ಕರೆ ನೀಡಿದರು.
ಇಲ್ಲಿನ ಕೆ.ಆರ್. ರಸ್ತೆಯಲ್ಲಿರುವ ಎಸ್.ಎಸ್. ಜನರಲ್ ಆಸ್ಪತ್ರೆಯಲ್ಲಿ ಅಳವಡಿಸಿರುವ ಅತ್ಯಾಧುನಿಕ ಡಯಾಲಿ ಸಿಸ್ ಕೇಂದ್ರ ವನ್ನು ಇಂದು ಸಂಜೆ ಉದ್ಘಾಟಿಸಿ ಅವರು ಮಾತನಾಡಿ ದರು.
ಎಸ್.ಎಸ್. ಜನಕಲ್ಯಾಣ ಟ್ರಸ್ಟ್ ನಲ್ಲಿ 10 ಕೋಟಿ ರೂ. ಠೇವಣಿಯ ಬಡ್ಡಿ ಹಣದಲ್ಲಿ ಸಾಮಾಜಿಕ ಕಾರ್ಯಕ್ರಮ ಗಳನ್ನು ಕೈಗೆತ್ತಿಕೊಂಡಿದ್ದು, ಸಾರ್ವಜನಿ ಕರಿಗೆ ಉತ್ತಮ ಸೇವೆ ಲಭಿಸಲಿ ಎಂದು ಆಶಿಸಿದ ಎಸ್ಸೆಸ್, ವೈದ್ಯರು ರೋಗಿಗಳಿಗೆ ತೊಂದರೆಯಾಗದಂತೆ ಅವರಿಗೆ ಸ್ಪಂದಿಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಜಂಟಿ ಕಾರ್ಯದರ್ಶಿಯೂ ಆಗಿರುವ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಮಾತನಾಡಿ, ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಜೀವನ ಸಾಗಿಸುವ ಬಡವರಿಗೆ ಈ ಸೇವೆ ವರದಾನವಾಗಿದ್ದು ಉಚಿತ ಸೇವೆ ನೀಡಲು ಮುಂದಾಗಿರುವ ಎಸ್ಸೆಸ್ ಕೇರ್ನ ಉತ್ತಮ ಕಾರ್ಯವನ್ನು ಸರ್ವರೂ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಖಾಸಗಿ ಆಸ್ಪತ್ರೆಗಳಲ್ಲಿ ತಿಂಗಳಿಗೆ 15 ರಿಂದ 20 ಸಾವಿರ ಖರ್ಚು ಬಡವರಿಗೆ ಶಾಪವಾಗಿರುವ ಇಂತಹ ದಿನಗಳಲ್ಲಿ ಸಾಮಾಜಿಕ ಸೇವೆಗೆ ಮುಂದಾಗಿರುವ ಎಸ್.ಎಸ್. ಕೇರ್ನ ಲಾಭ ಪಡೆದು ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಎಸ್ಸೆಸ್ಸೆಂ, ವೈದ್ಯರ ಉತ್ಸಾಹ, ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕರಾದ ಎಸ್.ಎಸ್.ಜಯಣ್ಣ, ಅಥಣಿ ವೀರಣ್ಣ, ಸಂಪನ್ನ ಮುತಾಲಿಕ್, ಖಜಾಂಚಿ ಎ.ಎಸ್.ನಿರಂಜನ್, ಆಡಳಿತ ನಿರ್ದೇಶಕ ಎಂ.ಜಿ.ರಾಜಶೇಖರಪ್ಪ, ಶೈಕ್ಷಣಿಕ ನಿರ್ದೇಶಕ ಡಾ|| ಎಂ.ಜಿ.ಈಶ್ವರಪ್ಪ, ಜೆಜೆಎಂಎಂಸಿ ಪ್ರಾಂಶುಪಾಲ ಡಾ|| ಎಸ್.ಬಿ.ಮುರುಗೇಶ್, ಆಡಳಿತಾಧಿಕಾರಿ ಸತ್ಯನಾರಾಯಣ, ಬಾಪೂಜಿ ಆಸ್ಪತ್ರೆ ನಿರ್ದೇಶಕ ಡಾ|| ಡಿ.ಎಸ್.ಕುಮಾರ್, ಎಸ್.ಎಸ್.ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ|| ಎನ್.ಕೆ.ಕಾಳಪ್ಪನವರ್, ಪ್ರಾಂಶುಪಾಲ ಡಾ|| ಬಿ.ಎಸ್.ಪ್ರಸಾದ್, ಡಾ|| ಸುಬ್ಬಾರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.