ಹರಿಹರ, ಜ.27- ಕೂಡಲಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ ಪಂಚಲಕ್ಷ ಪಾದಯಾತ್ರೆಯ ಐತಿಹಾಸಿಕ ಬೃಹತ್ ಜಾಗೃತಿ ಸಭೆಯು ಗುರುವಾರ ಸಂಜೆ ನಾಲ್ಕು ಗಂಟೆಗೆ ಗಾಂಧೀ ಮೈದಾನದಲ್ಲಿ ನಡೆಯಲಿದ್ದು, ಪೂರ್ವ ಸಿದ್ದತೆಯನ್ನು ಎಎಸ್ಪಿ ಎಂ. ರಾಜೀವ್ ವೀಕ್ಷಿಸಿ, ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿರುವ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಅವರಿಂದ ಮಾಹಿತಿ ಪಡೆದರು.
ಇದೇ ಸಂದರ್ಭದಲ್ಲಿ ವೇದಿಕೆಯ ಹಂದರಗಂಬ ಪೂಜೆ ನೆರವೇರಿಸಿ ಮಾತನಾಡಿದ ಶಿವಶಂಕರ್ ಅವರು, ಶ್ರೀಗಳು ಹರಪನಹಳ್ಳಿ ತಾಲ್ಲೂಕಿನ ತೆಲಿಗಿಯಿಂದ ಹೊರಟು ಹರಿಹರಕ್ಕೆ ಸಂಜೆ ನಾಲ್ಕು ಗಂಟೆಗೆ ತಲುಪಲಿದ್ದಾರೆ. ಅವರನ್ನು ಗುತ್ತೂರಿನ ಸತ್ಯ ಗಣಪತಿ ದೇವಸ್ಥಾನದಿಂದ ಸ್ವಾಗತಿಸಿಕೊಂಡು ಕುಂಭ ಮೇಳ, ಸಮಾಳ. ಭಾಜಾ ಭಜಂತ್ರಿ, ನಂದಿಕೋಲು, ಆನೆ ಅಂಬಾರಿ, ಜೋಡೆತ್ತುಗಳ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಗುವುದು.
ಗಾಂಧಿ ಮೈದಾನದಲ್ಲಿ ನಡೆಯುವ ಕಾರ್ಯ ಕ್ರಮಕ್ಕೆ ಬರುವ ಸುಮಾರು 8 ರಿಂದ 10 ಸಾವಿರ ಭಕ್ತರಿಗಾಗಿ ಆಸನಗಳ ವ್ಯವಸ್ಥೆ ಮಾಡಲಾಗುವುದು. 30×70 ಅಳತೆಯ ಬೃಹತ್ ವೇದಿಕೆಯನ್ನು ಸಿದ್ದಪಡಿಸಲಾಗುವುದು. ಬಂದ ಭಕ್ತಾದಿಗಳಿಗೆ 10 ಊಟದ ಕೌಂಟರ್ಗಳನ್ನು ಮಾಡಲಾಗುವುದು. ಶ್ರೀಗಳು ರಾಘವೇಂದ್ರ ಮಠದಲ್ಲಿ ತಮ್ಮ ವಾಸ್ತವ್ಯ ಮಾಡಲಿದ್ದು, ಅಲ್ಲಿಯೂ ಸಹ ಎಲ್ಲಾ ರೀತಿಯ ಪೂರ್ವ ಸಿದ್ದತೆ ಮಾಡಲಾಗಿದೆ.
ಹೆಚ್ಚುವರಿ ಸಹಾಯಕ ಪೊಲೀಸ್ ಅಧಿಕಾರಿ ಎಂ. ರಾಜೀವ್, ಸಿಪಿಐ ಸತೀಶ್ಕುಮಾರ್, ಪಿಎಸ್ಐ ರವಿಕುಮಾರ್, ಡಿ, ಬಸವರಾಜ್ ಸುನೀಲ್ ತೇಲಿ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು. ಸಮಾಜದ ಮುಖಂಡರಾದ ಎಂ.ಜಿ ನಾಗನಗೌಡ್ರು, ಹೊಸಳ್ಳಿ ನಾಗಪ್ಪ, ಕಮಲಾಪುರದ ಶಿವನಗೌಡ, ಬಸವರಾಜ್ ಪೂಜಾರ್, ಕುಮಾರ್ ಹೊಳೆಸಿರಿಗೆರೆ, ನಗರಸಭೆ ಸದಸ್ಯ ಪಿ.ಎನ್. ವಿರುಪಾಕ್ಷ, ಜಿ. ನಂಜಪ್ಪ, ಫೈನಾನ್ಸ್ ಮಂಜುನಾಥ್, ಚೂರಿ ಜಗದೀಶ್, ಮಂಜುನಾಥ್ ದೇಸಾಯಿ, ಅಲ್ತಾಫ್, ಸುರೇಶ್ ಹಾದಿಮನಿ, ಗೌಡ್ರುಪುಟ್ಟಪ್ಪ, ನೆಲ್ಲಿ ಬಸವರಾಜ್, ಕತ್ತಲಗೆರೆ ರಾಜು, ಕಲ್ಲಯ್ಯ, ಪ್ರೇಮ್ ಕುಮಾರ್, ಲತಾ ಕೊಟ್ರೇಶ್, ರಾಗಿಣಿ ಪ್ರಕಾಶ್, ಜಯ್ಯಮ್ಮ, ಉಮಾ, ಗಾಯತ್ರಮ್ಮ, ರುದ್ರಮ್ಮ, ನೀಲಮ್ಮ ಹಾಗೂ ಮತ್ತಿತರರಿದ್ದರು.