ಸ್ವಾಗತಕ್ಕೆ ಸಿದ್ಧತೆ, ಇಬ್ಬರೂ ಪೀಠಾಧಿಪತಿಗಳು ಭಾಗಿ
ದಾವಣಗೆರೆ,ಜ.26- 2ಎ ಮೀಸಲಾತಿಗಾಗಿ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಪಾದಯಾತ್ರೆ ಇದೇ ದಿನಾಂಕ 29 ರಂದು ನಗರಕ್ಕೆ ಆಗಮಿಸಲಿದ್ದು, ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸ್ವಾಗತ ಸಮಿತಿ ಗೌರವಾಧ್ಯಕ್ಷ ಹೆಚ್.ಎಸ್. ನಾಗರಾಜ್ ಹೇಳಿದ್ದಾರೆ.
ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿ.ಬಿ. ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಧ್ಯಾಹ್ನ 3 ಗಂಟೆಗೆ ಪಾದಯಾತ್ರೆಗೆ ಸ್ವಾಗತಿಸಲಾಗು ವುದು. ಸಂಜೆ 4 ಗಂಟೆಗೆ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾವೇಶ ನಡೆಯಲಿದೆ.
ಸಮಾವೇಶದಲ್ಲಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರುಗಳು ಶ್ರೀ ವಚನಾ ನಂದ ಸ್ವಾಮೀಜಿ, ಬಸಸವನಗೌಡ ಪಾಟೀಲ ಯತ್ನಾಳ್, ಪಂಚಮಸಾಲಿ ಟ್ರಸ್ಟಿನ ಧರ್ಮದರ್ಶಿ ಬಿ.ಸಿ. ಉಮಾ ಪತಿ, ಸಮಾಜದ ಮುಖಂಡರಾದ ಬಿ.ಲೋಕೇಶ್, ದೊಡ್ಡಪ್ಪ, ಸೋಮಣ್ಣ ಬೇವಿನಮರದ, ವಿಜಯಾನಂದ ಕಾಶಂಪುರ, ನಂದಿಹಳ್ಳಿ ಹಾಲಪ್ಪ ಇತರರು ಭಾಗವಹಿಸಲಿದ್ದಾರೆ ಎಂದರು.
ಸಮಾಜದಲ್ಲಿ ಯಾವುದೇ ಗೊಂದಲ ಇರದಿದ್ದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅವರ ಸ್ವಾರ್ಥಕ್ಕೆ ಸಮಾಜವನ್ನು ಇಬ್ಬಾಗ ಮಾಡಲು ಯತ್ನಿಸುತ್ತಿದ್ದಾರೆ. ಹರಪನಹಳ್ಳಿಯಲ್ಲಿ ಎರಡೂ ಪೀಠದ ಶ್ರೀಗಳು ಒಂದಾಗಿ ಪಟ್ಟಭದ್ರ ಹಿತಾಸಕ್ತಿಗಳ ಕಾಯಕ್ಕೆ ಇತಿಶ್ರೀ ಹಾಡಲಾಗಿದೆ. ಎರಡೂ ಪೀಠಗಳು ಒಂದಾಗಿವೆ. ಒಂದಾಗಿಯೇ ಇರ ಲಿವೆ. ಮೀಸಲಾತಿಗಾಗಿ ಎರಡೂ ಪೀಠದ ಜಗದ್ಗುರುಗಳು ಹೋರಾಟ ನಡೆಸಲಿದ್ದಾರೆ ಎಂದು ಹೇಳಿದರು.
ಸಮಾಜದ ಮುಖಂಡಾರದ ಪ್ರಭು ಕಲಬುರ್ಗಿ, ವೀಣಾ ಕಾಶೆಪ್ಪನವರ್, ಬಶೆಟೆಪ್ಪ, ಮಂಜುಳಾ ಮಹೇಶ್, ಬಾತಿ ನಾಗರಾಜ್, ಹದಡಿ ರವಿ, ತಣಿಗೇರಿ ಶಿವಕುಮಾರ್, ಮೇಗಳಗೆರೆ ಚನ್ನಬಸಪ್ಪ, ಮಂಜುನಾಥ ಅಗಡಿ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.