ಬುದ್ಧಿಮಾಂದ್ಯ ವಿಕಲಚೇತನರಿಗೆ ಕಲಿಕಾ ಸಾಮಗ್ರಿ ವಿತರಣೆ

ದಾವಣಗೆರೆ, ಜ.24- ಅಂಗವಿಕಲ ಆಶಾಕಿರಣ ಟ್ರಸ್ಟ್ ಭಾವೈಕ್ಯತಾ ವಸತಿಯುತ ಶಾಲೆಯ ವಿಶೇಷ ಬುದ್ಧಿ ಮಾಂದ್ಯ ಮಕ್ಕಳಿಗೆ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿಆರ್‌ಸಿ) ವತಿಯಿಂದ 58 ಟಿಎಲ್‌ಎಂ (ಶಿಕ್ಷಣ ಕಲಿಕಾ ಸಾಮಗ್ರಿ) ಕಿಟ್‌ಗಳನ್ನು ವಿತರಣೆ ಮಾಡಲಾಯಿತು.

ಟ್ರಸ್ಟ್‌ ಅಧ್ಯಕ್ಷ ರಮಣ್ ಲಾಲ್ ಸಂಘ್ವಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಹಿರಿಯ ನಾಗರಿಕರು ಮತ್ತು ಅಂಗವಿಕಲರ ಕಲ್ಯಾಣಾಧಿಕಾರಿ ಜಿ.ಎಸ್. ಶಶಿಧರ್ ಉಪಸ್ಥಿತರಿದ್ದು ಮಾತನಾಡಿದರು. ಸಿಆರ್‌ಸಿ ಕೇಂದ್ರದ ನಿರ್ದೇಶಕ ಡಾ. ಜ್ಞಾನವೇಲ್, ಪುನರ್ವಸತಿ ಅಧಿಕಾರಿ ಕನಕ ಸಭಾಪತಿ, ತರಬೇತುದಾರರಾದ ಗಣಪತಿ ಕಾಗಲ್‌ಕರ್, ರಾಜು ಇನ್ನಿತರರಿದ್ದರು.

error: Content is protected !!