ದಾವಣಗೆರೆ, ಜ.22- ಗಂಗಾ ನದಿಯನ್ನು ಮಹಾನದಿಗೆ-ಗೋದಾವರಿ, ನರ್ಮದಾ, ತಪಸಿ, ಗಂಡಕಿ, ಕೃಷ್ಣ ಹಾಗೂ ಕಾವೇರಿ ನದಿ ಜೋಡಣೆಗಾಗಿ ಕೇಂದ್ರ ಬಜೆಟ್‌ನಲ್ಲಿ 5 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಾಗಿಡುವಂತೆ ನದಿ ಜೋಡಣೆ ಕ್ರಿಯಾ ಸಮಿತಿ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ ತಿಳಿಸಿದ್ದಾರೆ.
ನದಿ ಜೋಡಣೆಯಿಂದ 10 ಕೋಟಿ ಎಕರೆಗಿಂತಲೂ ಹೆಚ್ಚು ಪ್ರದೇಶ ನೀರಾವರಿ ಪ್ರದೇಶವಾಗಲಿದ್ದು, 35 ಕೋಟಿ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಕಾಲುವೆ ನಿರ್ಮಾಣದಿಂದ ಸಂಚಾರ ಸುಲಭವಾಗಿ ಸಮಯ ಹಾಗೂ ಹಣದ ಉಳಿತಾಯವಾಗಲಿದೆ. ಉತ್ತರದಲ್ಲಿ ಪ್ರವಾಹದ ಹಾವಳಿ ಹಾಗೂ ದಕ್ಷಿಣ ಭಾರತದಲ್ಲಿ ಬರಗಾಲದ ಬವಣೆ ಶಾಶ್ವತವಾಗಿ ತಡೆಗಟ್ಟಬಲ್ಲ ಯೋಜನೆ ಇದಾಗಿದೆ ಎಂದು ತಿಳಿಸಿದ್ದಾರೆ.