2ಎ ಮೀಸಲಾತಿ ಪಾದಯಾತ್ರೆಗೆ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಬೆಂಬಲ

ದಾವಣಗೆರೆ, ಜ.22- ಪಂಚಮ ಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ, ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವ ದಲ್ಲಿ ಕೂಡಲ ಸಂಗಮದಿಂದ ಬೆಂಗಳೂರು ವರೆಗೆ ಕೈಗೊಂಡಿರುವ ಪಾದಯಾತ್ರೆಗೆ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಸಂಪೂರ್ಣ ಬೆಂಬಲಿವಿದೆ ಎಂದು ಸಂಘದ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ ತಿಳಿಸಿದ್ದಾರೆ.

1994ರಲ್ಲಿ ಅಸ್ತಿತ್ವಕ್ಕೆ ಬಂದಿರುವ ನಮ್ಮ ಸಂಘದ ಮೊದಲ ಸಮಾವೇಶದಲ್ಲಿಯೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಿ, ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕೆಂದು ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರನ್ನು ಒತ್ತಾಯಿಸ ಲಾಗಿತ್ತು. ಬಳಿಕ ಪ್ರಧಾನಮಂತ್ರಿಗೆ ಮನವಿ ಸಹ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2004ರಲ್ಲಿ ಸಂಘಕ್ಕೆ ಪತ್ರ ಬರೆದು ರಾಜ್ಯ ಗೆಜೆಟ್‍ನಲ್ಲಿ ಪಂಚಮಸಾಲಿ ಸಮಾಜದ ಹೆಸರು ಸೇರಿಸಿದರೆ, ನಿಮ್ಮ ಮನವಿಯನ್ನು ಪರಿಗಣಿಸಲಾಗುವುದು ಎಂದು ತಿಳಿಸಲಾಗಿತ್ತು ಎಂದು  ಇಂದಿಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈಗ ಇದೇ ಬೇಡಿಕೆಗಳಿಗಾಗಿ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಪಾದಯಾತ್ರೆ ನಡೆಸುತ್ತಿದ್ದು, ಈ ಪಾದಯಾತ್ರೆಗೆ ನಮ್ಮೆಲ್ಲರ ಸಂಪೂರ್ಣ ಬೆಂಬಲವಿದೆ. ಜಿಲ್ಲೆಗೆ ಪಾದಯಾತ್ರೆ ಆಗಮಿಸುವಾಗ ಸ್ವಾಗತಿಸಿ, ಭಾಗವಹಿಸುತ್ತೇವೆ ಎಂದ ಅವರು, ಪಾದಯಾತ್ರೆ ಮಧ್ಯ ಕರ್ನಾಟಕಕ್ಕೆ ತಲುಪುವ ಮುನ್ನವೇ ರಾಜ್ಯ ಸರ್ಕಾರ ಈ ಎರಡೂ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ನಾಗನಗೌಡ್ರು, ಹರಿಹರ ಪಂಚಮಸಾಲಿ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಮುಖಂಡರಾದ ಬಿ.ಲೋಕೇಶ್, ಶಿವಕುಮಾರ್, ಗುರುಶಾಂತ್, ಬಾಬಣ್ಣ, ಜ್ಯೋತಿ ಪ್ರಕಾಶ್, ಕುಮಾರಸ್ವಾಮಿ ಸೇರಿದಂತೆ ಇತರರು ಇದ್ದರು.

error: Content is protected !!