ನಗರದಲ್ಲಿ `ಲೆದರ್ ಬಾಲ್ ಕ್ರಿಕೆಟ್ ಟೂರ್ನಿ’ಗೆ ತೆರೆ

ಬಳ್ಳಾರಿ ಡಾ. ಮಸ್ತಿಕರ್ ಕ್ರಿಕೆಟ್ ಅಕಾಡೆಮಿಗೆ ‘ಮಯೂರ ಕಪ್’

ದಾವಣಗೆರೆ, ಜ.20- ಮಕರ ಸಂಕ್ರಾಂತಿ ಪ್ರಯುಕ್ತ ನಗರದ ಮಯೂರ ಕ್ರಿಕೆಟ್ ಕ್ಲಬ್ ಆಯೋಜಿಸಿದ್ದ 16 ವರ್ಷದ ಒಳಗಿನ ಬಾಲಕರ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಳ್ಳಾರಿಯ ಡಾ. ಮಸ್ತಿಕರ್ ಕ್ರಿಕೆಟ್ ಅಕಾಡೆಮಿ ‘ಮಯೂರ ಕಪ್’ ಎತ್ತಿ ಹಿಡಿಯಿತು.

ಬುಧವಾರ ಎಂಬಿಎ ಕಾಲೇಜಿನ ಟರ್ಫ್ ಅಂಗಳದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಮಸ್ತಿಕರ್ ತಂಡ ಚಿತ್ರದುರ್ಗದ ಮದಕರಿ ಕ್ರಿಕೆಟ್ ಅಕಾಡೆಮಿಯನ್ನು 5 ವಿಕೆಟ್‌ ಗಳ ಅಂತರದಿಂದ ಮಣಿಸುವ ಮೂಲಕ ಜಯ ಸಾಧಿಸಿತು. ಸರಣಿ ಉದ್ದಕ್ಕೂ ಉತ್ತಮ ಪ್ರದರ್ಶನ ತೋರಿದ್ದ ಮದಕರಿ ಬಾಯ್ಸ್ ರನ್ನರ್‌ ಅಪ್‌ಗೆ ಸಮಾಧಾನ ಪಡಬೇಕಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಚಿತ್ರದುರ್ಗ ಮದಕರಿ ತಂಡ ನಿಗದಿತ 25 ಓವರ್‌ಗಳಲ್ಲಿ 117 ರನ್ನುಗಳ ಸಾಧಾರಣ ಮೊತ್ತ ಕಲೆಹಾಕಿತು. ತಂಡದ ಪರವಾಗಿ ದೈವಿಕ್ 62 ಗಳಿಸಿ ಮೊತ್ತ ನೂರರ ಗಡಿ ದಾಟುವಂತೆ ನೋಡಿಕೊಂಡರು.

ಈ ಸಾಧಾರಣ ಮೊತ್ತ ಬೆನ್ನತ್ತಿದ ಬಳ್ಳಾರಿಯ ಮಸ್ತಿಕರ್ ಬಾಯ್ಸ್ ಇನ್ನೂ 12 ಎಸೆತಗಳು ಬಾಕಿ ಇರುವಂತೆಯೇ 118 ರನ್‌ ಗಳಿಸಿ ‘ಮಯೂರ ಕಪ್‌ಗೆ’ ಮುತ್ತಿಕ್ಕಿದರು. ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಲಕ್ಷ್ಮಿ ಸಾಗರ್ 36, ಮಹೇಂದರ್ 24 ಮತ್ತು ಸಂಜಯ್ ಅವರ 17 ರನ್ನುಗಳು ಮಸ್ತಿಕರ್ ತಂಡದ ಗೆಲು ವಿನಲ್ಲಿ ಪ್ರಮುಖ ಪಾತ್ರ ವಹಿಸಿದವು. ತಂಡ ಗೆಲುವಿನ ನಗೆ ಬೀರುತ್ತಿದ್ದಂ ತೆಯೇ ಮಸ್ತಿಕರ್ ಆಟಗಾರರು ಕ್ರೀಡಾಂ ಗಣದಲ್ಲಿ ಕುಣಿದು ಕುಪ್ಪಳಿಸಿದರು.

ಇದಕ್ಕೂ ಮುನ್ನ ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ದಾವಣಗೆರೆ ಯುನೈಟೆಡ್ ಬಾಲಕರು ಆತಿಥೇಯ ದಾವಣಗೆರೆ ಕ್ರಿಕೆಟ್ ಕ್ಲಬ್ ಅಕಾಡೆಮಿ ಹುಡುಗರ ವಿರುದ್ಧ ಜಯ ಗಳಿಸಿ  ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದರು.

ಸಂಜೆ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಎಲ್.ಎಂ. ಪ್ರಕಾಶ್, ಕೆ. ಶಶಿಧರ್, ಹುಚ್ಚ ವ್ವನಹಳ್ಳಿ ಮಂಜುನಾಥ್, ವಿಜಯ ವಾಣಿ ಸ್ಥಾನಿಕ ಸಂಪಾದಕ ನವೀನ್, ಮೋಹನ್‌ರಾವ್, ಬಸವರಾಜ್, ತಿಮ್ಮೇಶ್ ಮತ್ತಿತರರಿದ್ದರು.

error: Content is protected !!