ಜಿಲ್ಲೆಯಲ್ಲಿ 752 ಜನರಿಗೆ ಕೋವಿಡ್ ಲಸಿಕೆ

ಜಿಲ್ಲೆಯಲ್ಲಿ 752 ಜನರಿಗೆ ಕೋವಿಡ್ ಲಸಿಕೆ - Janathavaniದಾವಣಗೆರೆ, ಜ.18- ಜಿಲ್ಲೆಯಲ್ಲಿ ಸೋಮವಾರ 13 ಆರೋಗ್ಯ ಕೇಂದ್ರಗಳಲ್ಲಿ 752 ಆರೋಗ್ಯ  ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. 1258 ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು.

ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ 84, ಕೆರೆಬಿಳಚಿಯಲ್ಲಿ 74, ನ್ಯಾಮತಿಯಲ್ಲಿ 33, ಹರಿಹರ ತಾ.ಮಲೇಬೆನ್ನೂರಿನಲ್ಲಿ 70 ಜನರಿಗೆ ಲಸಿಕೆ ನೀಡಲಾಗಿದೆ.

ದಾವಣಗೆರೆ ಭಾಷಾನಗರದ ನಗರ ಆರೋಗ್ಯ ಕೇಂದ್ರದಲ್ಲಿ 42, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 54, ಬಾಪೂಜಿಯ ಆಸ್ಪತ್ರೆ ಹಾಗೂ ಎಸ್.ಎಸ್.ಐ.ಎಂ.ಎಸ್. ಕೇಂದ್ರಗಳಲ್ಲಿ 281 ಹಾಗೂ ಚಿಗಟೇರಿ ಜಿಲ್ಲಾಸ್ಪತ್ರೆಯ 2 ಕೇಂದ್ರಗಳಲ್ಲಿ 114 ಜನರು ಲಸಿಕೆ ಪಡೆದಿದ್ದಾರೆ.

8 ಜನರಿಗೆ ಕೊರೊನಾ ಪಾಸಿಟಿವ್ : ಜಿಲ್ಲೆಯ 8 ಜನರಲ್ಲಿ ಸೋಮವಾರ ಕೊರೊನಾ ಸೋಂಕು ದೃಢಪಟ್ಟ ಬಗ್ಗೆ ವರದಿಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 4, ಚನ್ನಗಿರಿ ಹಾಗೂ ಹೊನ್ನಾಳಿ ತಾಲ್ಲೂಕಿನಲ್ಲಿ ತಲಾ ಇಬ್ಬರಲ್ಲಿ ಸೋಂಕು ಕಾಣಸಿಕೊಂಡಿದೆ. 16 ಜನರು ಸೋಂಕು ಮುಕ್ತರಾಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ 106 ಸಕ್ರಿಯ ಪ್ರಕರಣಗಳಿವೆ.

error: Content is protected !!