ಸರ್ಕಾರದಿಂದ ಅನುದಾನ ತರಲು ಶಾಸಕರ ನಿರಂತರ ಪ್ರಯತ್ನ ಅಗತ್ಯ

ಮಲೇಬೆನ್ನೂರು, ಜ.18- ಕ್ಷೇತ್ರದ ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರದಿಂದ ಅನುದಾನ ತರಲು ಶಾಸಕ ಎಸ್‌. ರಾಮಪ್ಪನವರು ನಿರಂತರ ಹೋರಾಟ ಮಾಡಬೇಕೆಂದು ಜಿಗಳಿಯ ಇಂದೂಧರ್ ಹೇಳಿದರು.

ಪಟ್ಟಣದಲ್ಲಿ ಕರೆದಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಶಾಸಕರು ವಿನಾಕಾರಣ ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ, ತಾರತಮ್ಯ ಮಾಡುತ್ತಿದೆ ಎಂಬ ಆರೋಪ ಮಾಡುವುದನ್ನು ಬಿಟ್ಟು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅನುದಾನ ತರಲು ಪ್ರಯತ್ನಿಸಬೇಕೆಂದರು.

ಉಕ್ಕಡಗಾತ್ರಿ ಗ್ರಾಮದ ತುಂಗಭದ್ರಾ ನದಿಗೆ ತಡೆಗೋಡೆ ನಿರ್ಮಾಣಕ್ಕೆ ಅನುದಾನ ನೀಡುವಂತೆ 2012 ರಿಂದಲೂ ಸರ್ಕಾರದ ಮಟ್ಟದಲ್ಲಿ ನನ್ನ ನಿರಂತರ ಪ್ರಯತ್ನದ ಫಲವಾಗಿ 4 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಶಾಸಕರ ಪ್ರಯತ್ನ ಇಲ್ಲ ಎಂದು ಹೇಳಿದರು. 

ಈ ಹಿಂದೆ ನೀರಾವರಿ ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ, ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್‌ ಮತ್ತು ಈಗಿನ ಸರ್ಕಾರದ ಸಚಿವರಾದ ಮಾಧುಸ್ವಾಮಿ ಅವರ ಸಹಾಯ ಇದೆ ಎಂದು ಹೇಳಿದರು.

ಶಾಸಕರ ಪ್ರತಿಕ್ರಿಯೆ : ಇಂದೂಧರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಎಸ್‌. ರಾಮಪ್ಪ ಸುಳ್ಳು ಹೇಳಿಕೊಂಡು ದೊಡ್ಡವರಾಗಲು ಎಂದಿಗೂ ಸಾಧ್ಯ ವಿಲ್ಲ. ಇಂತವರನ್ನು ಜನರೂ ನಂಬುವುದಿಲ್ಲ. ಸಚಿವ ರಾಗಿದ್ದ ಡಿ.ಕೆ. ಶಿವಕುಮಾರ್‌, ಎಂ.ಬಿ. ಪಾಟೀಲ್‌ ಅವರ ಬಳಿ ನಾನು ಇಂದೂಧರ್‌ ಅವರನ್ನು ಕರೆದು ಕೊಂಡು ಹೋಗಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೆವು. ಈಗ ಈ ರೀತಿ ಸುಳ್ಳು ಹೇಳಿದರೆ ಆ ದೇವರೇ ನೋಡಿಕೊಳ್ಳುತ್ತಾನೆ ಎಂದರು.

error: Content is protected !!