ಕೊಟ್ಟೂರು : ಗ್ರಾ. ಪಂ.ಗಳ ಅಧ್ಯಕ್ಷರ-ಉಪಾಧ್ಯಕ್ಷರ ಮೀಸಲಾತಿ ಪ್ರಕಟ

ಕೊಟ್ಟೂರು, ಜ.18- ತಾಲ್ಲೂಕಿನ ಹದಿನಾಲ್ಕು ಗ್ರಾಮ ಪಂಚಾಯಿತಿಗಳ ಮೊದಲ ಹಂತದ ಮೂವತ್ತು ತಿಂಗಳ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ.

ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಈ ಮೀಸಲಾತಿಯನ್ನು ಪ್ರಕಟಿಸಲಾಯಿತು. ಮೀಸಲಾತಿ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಮೀಸಲಾತಿ ಯನ್ನು ನಿಯಮಾನುಸಾರ ಅಧ್ಯಕ್ಷರ, ಉಪಾಧ್ಯಕ್ಷರ ಮೀಸಲಾತಿಯನ್ನು ಪರಿಶೀಲಿಸಿ ನಿಗದಿಪಡಿಸಲಾಗಿದೆ.

ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ, ಹರಪನಹಳ್ಳಿ ಸಹಾಯಕ ಆಯುಕ್ತ ಪ್ರಸನ್ನಕುಮಾರ್, ಕೊಟ್ಟೂರು ತಹಶೀಲ್ದಾರ್‌ ಜಿ. ಅನಿಲ್‌ಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಬಾಬು ಎಂ, ಸಿಪಿಐ ದೊಡ್ಡಪ್ಪ ಹಾಜರಿದ್ದು ಮೀಸಲಾತಿ ಪ್ರಕಟಣೆಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಸಿ.ಮ. ಗುರುಬಸವರಾಜ್ ನಿರೂಪಿಸಿದರು.

ಕೊಟ್ಟೂರು ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ/ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಹೀಗಿದೆ.

ಉಜ್ಜಿನಿ : ಅಧ್ಯಕ್ಷರು – ಪ್ರವರ್ಗ-`ಎ’, ಉಪಾಧ್ಯಕ್ಷರು: ಎಸ್‌ಸಿ ಮಹಿಳೆ. ಕೋಗಳಿ : ಅಧ್ಯಕ್ಷರು – ಪ್ರವರ್ಗ-`ಎ’ ಮಹಿಳೆ, ಉಪಾಧ್ಯಕ್ಷರು : ಎಸ್‌ಟಿ. ಕೆ. ಅಯ್ಯನಹಳ್ಳಿ : ಅಧ್ಯಕ್ಷರು – ಸಾಮಾನ್ಯ, ಉಪಾಧ್ಯಕ್ಷರು : ಎಸ್‌ಸಿ ಮಹಿಳೆ. ದೂಪದಹಳ್ಳಿ : ಅಧ್ಯಕ್ಷರು – ಸಾಮಾನ್ಯ, ಉಪಾಧ್ಯಕ್ಷರು : ಎಸ್‌ಟಿ ಮಹಿಳೆ. ಕಂದಗಲ್ಲು : ಅಧ್ಯಕ್ಷರು – ಸಾಮಾನ್ಯ, ಉಪಾಧ್ಯಕ್ಷರು : ಸಾಮಾನ್ಯ ಮಹಿಳೆ. ಹಾಳ್ಯಾ : ಅಧ್ಯಕ್ಷರು – ಸಾಮಾನ್ಯ, ಉಪಾಧ್ಯಕ್ಷರು : ಸಾಮಾನ್ಯ ಮಹಿಳೆ. ನಿಂಬಳಗೆರೆ : ಅಧ್ಯಕ್ಷರು – ಸಾಮಾನ್ಯ ಮಹಿಳೆ, ಉಪಾಧ್ಯಕ್ಷರು : ಸಾಮಾನ್ಯ. ತೂಲಹಳ್ಳಿ : ಅಧ್ಯಕ್ಷರು – ಸಾಮಾನ್ಯ ಮಹಿಳೆ, ಉಪಾಧ್ಯಕ್ಷರು : ಸಾಮಾನ್ಯ. ಕಾಳಪುರ : ಅಧ್ಯಕ್ಷರು – ಸಾಮಾನ್ಯ
ಮಹಿಳೆ, ಉಪಾಧ್ಯಕ್ಷರು : ಎಸ್‌ಸಿ. ಅಲಬೂರು : ಅಧ್ಯಕ್ಷರು – ಎಸ್‌ಸಿ, ಉಪಾಧ್ಯಕ್ಷರು : ಸಾಮಾನ್ಯ ಮಹಿಳೆ. ಅಂಬಳಿ : ಅಧ್ಯಕ್ಷರು – ಎಸ್‌ಸಿ ಮಹಿಳೆ, ಉಪಾಧ್ಯಕ್ಷರು : ಸಾಮಾನ್ಯ. ರಾಂಪುರ  : ಅಧ್ಯಕ್ಷರು – ಎಸ್‌ಸಿ ಮಹಿಳೆ, ಉಪಾಧ್ಯಕ್ಷರು: ಪ್ರವರ್ಗ-`ಎ’. ನಾಗರಕಟ್ಟೆ : ಅಧ್ಯಕ್ಷರು – ಎಸ್‌ಟಿ, ಉಪಾಧ್ಯಕ್ಷರು : ಪ್ರವರ್ಗ `ಎ’ ಮಹಿಳೆ. ಚಿರಿಬಿ : ಅಧ್ಯಕ್ಷರು – ಎಸ್‌ಟಿ ಮಹಿಳೆ, ಉಪಾಧ್ಯಕ್ಷರು : ಸಾಮಾನ್ಯ.

error: Content is protected !!