ದಾವಣಗೆರೆ, ಜ.16- ಮಕರ ಸಂಕ್ರಾಂತಿ ದಿನದಂದು ಎಳ್ಳು-ಬೆಲ್ಲ ಸವಿದು ಸಂತೋಷದಿಂದ ಗೋವಾ ಪ್ರವಾಸಕ್ಕೆ ಹೊರಟಿದ್ದ ನಗರದ ಪ್ರತಿಷ್ಠಿತ ಮನೆತನದ ಹೆಣ್ಣುಮಕ್ಕಳ ವಾಹನ ಅಪಘಾತಕ್ಕೀಡಾಗಿ 11 ಜನರು ಮೃತಪಟ್ಟಿದ್ದು, ರಾಜ್ಯಸಭೆಯ ಮಾಜಿ ಸದಸ್ಯ ಕೆ.ಆರ್. ಜಯದೇವಪ್ಪ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರುಗಳ ಅನಿರೀಕ್ಷಿತ ಅಗಲಿಕೆಯಿಂದ ಕುಟುಂಬ ವರ್ಗ, ಬಂಧುಗಳು ಹಾಗೂ ಸ್ನೇಹಿತರಿಗೆ ಆಗಿರುವ ದುಃಖವನ್ನು ಭರಿಸುವ ಶಕ್ತಿ ಯನ್ನು ದೇವರು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.