ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಮಹಮದ್ ತೌಫಿಕರ್ ದ್ವಿಶತಕ

ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಮಹಮದ್ ತೌಫಿಕರ್ ದ್ವಿಶತಕ - Janathavaniದಾವಣಗೆರೆ, ಜ.15- ನಗರದ ಮಯೂರ ಕ್ರಿಕೆಟ್ ಕ್ಲಬ್ ವತಿಯಿಂದ ಸಂಕ್ರಾಂತಿ  ಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ಆರು ದಿನಗಳ ಆಹ್ವಾನಿತ ಅಂತರ್ ಜಿಲ್ಲಾ ಮಟ್ಟದ 16 ವರ್ಷದೊಳಗಿನ ಬಾಲಕರ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯ ಎರಡನೇ ದಿನದ ಆಟದಲ್ಲಿ ದಾವಣಗೆರೆ ಕ್ರಿಕೆಟ್ ಅಕಾಡೆಮಿಯ ಮಹಮದ್ ತೌಫಿ ಕರ್ ಇಂದು ಮತ್ತೊಂದು ಶತಕ ಬಾರಿಸುವ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಶತಕ ಸಿಡಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬಳ್ಳಾರಿಯ ಡಾ. ಮಸ್ತಿಕರ್ ಅಕಾಡೆಮಿ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ತೌಫಿಕರ್ ಕೇವಲ 66 ಎಸೆತಗಳಲ್ಲಿ  102 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮತ್ತೊಂದು ಪಂದ್ಯಾವಳಿಯಲ್ಲಿ ದಾವಣಗೆರೆ ಯನೈಟೆಡ್ ಕ್ರಿಕೆಟ್ ಅಕಾಡೆಮಿ ಮತ್ತು ವೀನಸ್ ಪವರ್ ದಾವಣಗೆರೆ ಇವರ ಮಧ್ಯೆ ನಡೆದ ಪಂದ್ಯದಲ್ಲಿ ಆದರ್ಶ 64 ಕ್ಕೆ 66 ಮತ್ತು  ರಕ್ಷಿತ ನಾಯಕ ಅವರ ಅಮೋಘ 22 ರನ್ ಗಳ  ನೆರೆವಿನೊಂದಿಗೆ  155 ಉತ್ತಮ ಮೊತ್ತ ದಾಖಲಿಸಿದರು. ಇದಕ್ಕೆ ಉತ್ತರವಾಗಿ ವೀನಸ್ ಹುಡುಗರು 131 ಕ್ಕೆ ಆಲ್ ಔಟ್ ಆಗುವ ಮೂಲಕ ಸೋಲು ಅನುಭವಿಸಿದರು.

ಮೂರನೆ ಪಂದ್ಯದಲ್ಲಿ ಚಿತ್ರದುರ್ಗ ಮದಕರಿ ಕ್ರಿಕೆಟ್ ಕ್ಲಬ್ ಮತ್ತು ತುಮಕೂರು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚಿತ್ರದುರ್ಗದ ಮದಕರಿ ಬಾಲಕರು ಜಯಭೇರಿ ಬಾರಿಸಿದರು.

ಚಿತ್ರದುರ್ಗ ಮದಕರಿ ಬಾಲಕರು ಮತ್ತು ದಾವಣಗೆರೆಯ ಅಕಾಡೆಮಿ ತಂಡ ಆಡಿದ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಟೂರ್ನಿಯ ಅಗ್ರಸ್ಥಾನದಲ್ಲಿದ್ದಾರೆ.

ಉಳಿದಂತೆ ಬಳ್ಳಾರಿ ಬಾಲಕರು ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ.ಯುನೈಟೆಡ್ ಕ್ರಿಕೆಟ್ ಅಕಾಡೆಮಿ ಮತ್ತು ತುಮಕೂರು ಅಕಾಡೆಮಿ ಬಾಲಕರು ತಲಾ ಒಂದೊಂದು ಪಂದ್ಯ ಸೋತು, ಒಂದು ಪಂದ್ಯದಲ್ಲಿ ಗೆದ್ದು ತಲಾ ಎರಡು ಅಂಕ ಗಳಿಸಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಶುಕ್ರವಾರ ಬೆಳಿಗ್ಗೆ ಎಂಬಿಎ ಮೈದಾನಕ್ಕೆ ಆಗಮಿಸಿ ಬ್ಯಾಟ್ ಬೀಸುವ ಮೂಲಕ ಕ್ರೀಡಾಪಟುಗಳನ್ನು ಹುರಿದುಂಬಿಸಿದ  ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಇಂತಹ ವಿಶೇಷ ಪಂದ್ಯಗಳು ನಿರಂತರವಾಗಿ ನಡೆಯಬೇಕು. ಕ್ರಿಕೆಟ್ ಆಟಗಾರರಿಗೆ ಈ ಟರ್ಫ್ ಕ್ರೀಡಾಂಗಣವನ್ನು ಇನ್ನೂ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ,  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಶಾಮನೂರು ಟಿ. ಬಸವರಾಜ್, ಪಾಲಿಕೆ  ವಿಪಕ್ಷ ನಾಯಕ ಎ. ನಾಗರಾಜ್, ಸದಸ್ಯ ದೇವರಮನೆ ಶಿವಕುಮಾರ್, ಅಬ್ದುಲ್ ಲತೀಫ್, ಕೆ. ಚಮನ್ ಸಾಬ್, ಜಿ.ಡಿ. ಪ್ರಕಾಶ್, ಅಯೂಬ್ ಪೈಲ್ವಾನ್, ಎಲ್.ಎಂ. ಪ್ರಕಾಶ್, ತುಮಕೂರು ಲೋಕೇಶ್, ಕೆ. ಶಶಿಧರ್, ಅಶೋಕ್, ಕೆಎಸ್ ಸಿಎ ವಕ್ತಾರರಾದ ಮೋಹನ್‌ರಾವ್, ಅನಿಲ್, ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಕರಿಬಸಪ್ಪ, ತಿಮ್ಮೇಶ್, ಸಿರಿಗೆರೆ ಉಮೇಶ್, ರಂಗನಾಥ್, ಸಂತೋಷ್ ಕುಮಾರ್, ಎಲ್.ಬಿ. ಭೈರೇಶ್, ಅನಿತಾಬಾಯಿ ಮಾಲತೇಶ್, ಸುಷ್ಮಾ ಪಾಟೀಲ್ ಸೇರಿದಂತೆ ಇತರರು ಇದ್ದರು.

error: Content is protected !!