ಹರಪನಹಳ್ಳಿ, ಜ.13 – ಗದಾಯುದ್ಧವು ನಮ್ಮ ಶಿಷ್ಟ ಪರಂಪರೆಯನ್ನು ಪ್ರತಿನಿಧಿಸಿದರೆ ಜಾನಪದ ಸಂಗೀತವು ದೇಶೀಕಲೆಗಳ ಪ್ರತಿನಿಧಿ. ಎರಡೂ ನಮ್ಮ ಸಾಂಸ್ಕೃತಿಕ ರಾಯಭಾರಿಗಳು ಎಂದು ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ ಹೇಳಿದರು.
ಪಟ್ಟಣದ ಎಡಿಬಿ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪಟ್ಟಣದ ಇಂದಿರಾಗಾಂಧಿ ಎಸ್ಸಿ, ಎಸ್ಟಿ ಮಹಿಳಾ ಕಲ್ಯಾಣ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಪ್ರಾಯೋಜಿತ ಕಾರ್ಯಕ್ರಮ ಕಲಾ ಕಾರ್ತಿಕ ಸಾಂಸ್ಕೃತಿಕ ಕಲೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರನ್ನ ಗದಾಯುದ್ಧವನ್ನು ಬರೆದಾಗ ತನ್ನ ಆಶ್ರಯದಾತ ಇರಿವಬೆಂಡಂಗನನ್ನು ವೈಭವೀ ಕರಿಸುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆ ದರೂ ಅದರಲ್ಲಿ ತನ್ನ ಸ್ವಂತಿಕೆಯನ್ನು ಮೆರೆದಿ ದ್ದಾನೆ. ಕವಿಗಳು ಇತಿಹಾಸವನ್ನೂ ಮರುಸೃಷ್ಠಿ ಸುವ ಕಲೆಗಾರರು ಎಂದು ಅವರು ಹೇಳಿದರು.
ಇಂದಿರಾಗಾಂಧಿ ಎಸ್ಸಿ, ಎಸ್ಟಿ ಮಹಿಳಾ ಕಲ್ಯಾಣ ಸಂಸ್ಥೆಯ ಅಂಬುಜಾ ರಾಮಪ್ಪ ಉದ್ಘಾಟನೆ ನೆರವೇರಿಸಿ ಮಾತನಾಡಿ, ವಿದ್ಯಾ ರ್ಥಿಗಳು ಮೊಬೈಲ್ ಮುಂದೆಯೇ ಕುಳಿತು ಕೊಂಡಿರಬೇಕಾದ ಇಂದಿನ ಪರಿಸ್ಥಿತಿಯಲ್ಲಿ ಅವರನ್ನು ನಿಜ ಲೋಕಕ್ಕೆ ಕರೆತರಲು ರಂಗಭೂಮಿ ಸಾಹಿತ್ಯ ಕ್ಷೇತ್ರಗಳು ಸಹಕಾರಿ. ಒಳಿತು-ಕೆಡುಕುಗಳ ಕತ್ತಲು-ಬೆಳಕಿನ ನಡುವೆ ನಡೆಯುವ ಗದಾಯುದ್ಧ ನಮ್ಮೊಳಗೆ ನಡೆ ಯುವ ಅಂತರ್ಯುದ್ಧವನ್ನು ಪ್ರತಿನಿಧಿಸುತ್ತದೆ ಎಂದರು.
ಎಡಿಬಿ ಕಾಲೇಜ್ ಆಡಳಿತ ಮಂಡಳಿಯ ಅಧ್ಯಕ್ಷ ಅಕ್ಕಿ ಶಿವಕುಮಾರ್ ಮಾತನಾಡಿ ಕೊರೊನಾ ಕಾಲದ ಬಿಕ್ಕಟ್ಟುಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಚೇತೋಹಾರಿಯಾಗ ಬಲ್ಲವು. ಜಾನಪದ ಗೀತೆಗಳು ಜನರಿಂದಲೇ ಹುಟ್ಟಿ ಜನರ ನೋವು ನಲಿವುಗಳನ್ನು ದಾಖಲಿಸುತ್ತವೆ ಎಂದರು.
ನಂತರ ಸುಜಾತ ಮತ್ತು ತಂಡದವರಿಂದ ಜಾನಪದ ಗೀತೆಗಳ ಗಾಯನ ನಡೆಯಿತು. ಹಗರಿ ಬೊಮ್ಮನ ಹಳ್ಳಿಯ ಭಗತ್ ಸಿಂಗ್ ಕಲಾತಂಡದ ಯುವ ಕಲಾವಿದರು ಗದಾಯುದ್ಧ ನಾಟಕವನ್ನು ರಂಜನೀಯವಾಗಿ ಪ್ರದರ್ಶಿಸಿದರು. ಕಾರ್ಯಕ್ರಮವನ್ನು ಘಂಟಿ ನಾಗರಾಜ್ ನಿರೂಪಿಸಿ, ನಿರ್ವಹಿಸಿದರು. ಹುಲಿಗೆಮ್ಮ ಸರ್ದಾರ್ ಸ್ವಾಗತಿಸಿದರು.