ಮೇಯರ್-ಉಪ ಮೇಯರ್ ಚುನಾವಣೆ :
ದಾವಣಗೆರೆ, ಜ.10- ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ನಡೆದ ಸಭೆಯ ನಂತರ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಅವರ ನೇತೃತ್ವದಲ್ಲಿ ಜಿಲ್ಲಾ ಚುನಾವಣಾ ವೀಕ್ಷಕ ಉಮಾಶಂಕರ್ ಅವರಿಗೆ ಕಳೆದ ಮೇಯರ್ – ಉಪಮೇಯರ್ ಚುನಾವಣೆಯಲ್ಲಿ ನಗರದಲ್ಲಿ ವಾಸವಿಲ್ಲದ ವಿಧಾನಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಯಿಂದ ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್ ಪಕ್ಷದ ಬಿಎಲ್ಎ ಗಳು ಆ ಭಾಗದ ಬಿಎಲ್ಓಗಳಿಗೆ ಫಾರಂ-7 ನೀಡಿದ್ದು, ಬಿಎಲ್ಓ ಮತ್ತು ಬಿಎಲ್ಎ ಪರಿಷತ್ ಸದಸ್ಯರ ವಿಳಾಸದಲ್ಲಿ ಪರಿಶೀಲನೆ ನಡೆಸಿ ಅಕ್ಕಪಕ್ಕದ ಮನೆಯವರ ಬಳಿ ಮಾಹಿತಿ ಪಡೆದು ಸ್ಥಳದಲ್ಲಿ ವಾಸ ಇರುವುದಿಲ್ಲ ಎಂದು ಇಆರ್ಓ ಸಲ್ಲಿಸಿರುತ್ತಾರೆ. ಆದಾಗ್ಯೂ ಇಆರ್ಓ ಈ ಬಗ್ಗೆ ಕ್ರಮ ತೆಗೆದುಕೊಂಡಿರುವುದಿಲ್ಲ. ಮುಂಬರುವ ಮೇಯರ್ – ಉಪಮೇಯರ್ ಚುನಾವಣೆಗೆ ದಾವಣಗೆರೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸವಿಲ್ಲದ ಪರಿಷತ್ ಸದಸ್ಯರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಹುನ್ನಾರ ನಡೆಯುತ್ತಿದ್ದು, ಇದನ್ನು ಸ್ಥಳ ಪರಿಶೀಲನೆ ಮಾಡಿ ಹೊಸದಾಗಿ ಸೇರ್ಪಡೆ ಮಾಡದಂತೆ ಸೂಕ್ತ ಕ್ರಮ ವಹಿಸಬೇಕಾಗಿ ಉಮಾಶಂಕರ್ ಅವರಲ್ಲಿ ಮನವಿಯನ್ನು ಸಲ್ಲಿಸಲಾಯಿತು.
ಎಸ್.ಆರ್. ಉಮಾಶಂಕರ್ ಮಹಾನಗರ ಪಾಲಿಕೆ ಕಾಂಗ್ರೆಸ್ ಪಕ್ಷದ ಸದಸ್ಯರ ಮನವಿಗೆ ಸ್ಪಂದಿಸಿ ದಾಖಲೆಗಳನ್ನು ಪರಿಶೀಲಿಸುತ್ತೇನೆ ಎಂದು ತಿಳಿಸಿದಾಗ ವಿಪಕ್ಷ ಸದಸ್ಯರು ಬೋಗಸ್ ದಾಖಲೆ ನೀಡಿದ್ದು, ಸ್ಥಳ ಪರಿಶೀಲನೆ ಮಾಡಬೇಕೆಂದು ಮನವಿ ಮಾಡಿದರು.
ನಾಗರಾಜ್ ಅವರೊಂದಿಗೆ ಪಾಲಿಕೆ ಸದಸ್ಯ ಸೈಯದ್ ಚಾರ್ಲಿ, ಮುಖಂಡರಾದ ಗಣೇಶ್ ಹುಲ್ಮನಿ, ಉಮೇಶ್ ಹಾಜರಿದ್ದರು.