ಹರಿಹರ : ಕುಸ್ತಿ ಪಂದ್ಯಗಳಿಗೆ ಚಾಲನೆ

ಹರಿಹರ, ಮಾ. 25 – ನಗರದಲ್ಲಿ ಶ್ರೀ ಗ್ರಾಮ ದೇವತೆ ಊರಮ್ಮ ದೇವಿಯ ಜಾತ್ರೆಯ ಅಂಗವಾಗಿ ಡಿ.ಆರ್.ಎಂ. ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಬಯಲು ಜಂಗಿ ಕುಸ್ತಿ ಪಂದ್ಯಕ್ಕೆ ಚಾಲನೆ ನೀಡಲಾಯಿತು.

ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ, ಸಾಂಗ್ಲಿ ಮತ್ತು ರಾಜ್ಯದಾದ್ಯಂತ ಬೆಳಗಾವಿ, ಹುಬ್ಬಳ್ಳಿ, ಬಾಗಲಕೋಟೆ, ಶಿವಮೊಗ್ಗ, ದಾವಣಗೆರೆ, ಹಾವೇರಿ, ರಾಣೇಬೆನ್ನೂರು, ಹೊನ್ನಾಳಿ ಸೇರಿದಂತೆ ವಿವಿಧ ನಗರಗಳಿಂದ ಆಗಮಿಸಿದ್ದ ಕುಸ್ತಿ ಪಟುಗಳು ಗೆಲುವಿಗಾಗಿ ಸೆಣಸಾಡಿದರು.

ಶಾಸಕ ಎಸ್. ರಾಮಪ್ಪ ಕುಸ್ತಿ ಪಂದ್ಯಕ್ಕೆ ಚಾಲನೆ ನೀಡಿದರು.  ದಾವಣಗೆರೆಯ ಟಿ. ದಾಸಕರಿಯಪ್ಪ, ಹಿರಿಯ ಕುಸ್ತಿ ಪಟು ಕೆ. ಜಡಿಯಪ್ಪ, ಉತ್ಸವ ಸಮಿತಿಯ ಅಧ್ಯಕ್ಷ ಕೆ. ಅಣ್ಣಪ್ಪ, ಸುರೇಶ್ ಚಂದಾಪೂರ್, ಜಗದೀಶ್ ಚೂರಿ, ಅಣ್ಣಪ್ಪ ಶಾವಿ, ಬ್ಯಾಂಕ್ ನಾಗರಾಜ್, ಕಾಳಿಗ ನಾಗರಾಜ್, ಹಂಚಿನ ನಾಗರಾಜ್, ಆಸೀಫ್ ಹಾಲಿ, ಪಾಲಾಕ್ಷಪ್ಪ, ಬೀರೇಶ್, ಕುಮಾರ್ ಅಡಿಕೆ ಇತರರು ಹಾಜರಿದ್ದರು.

ಗುತ್ತೂರು ಗ್ರಾಮಾಂತರ ಠಾಣೆಯ ಪಿಎಸ್ಐ ಸೈಪುದ್ದಿನ್ ಸಾಬ್, ಎ.ಎಸ್.ಐ. ವಿಜಯಕುಮಾರ್, ಪೊಲೀಸ್ ಸಿಬ್ಬಂದಿಗಳಾದ ರವಿಕುಮಾರ್, ರಾಜು ಸತೀಶ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು.

error: Content is protected !!