ಜಾಗೃತಿ ಸಭೆಯಿಂದ ನೂತನ ಕೃಷಿ ಕಾಯ್ದೆಯ ಅರಿವು ಮೂಡಿಸಬೇಕು

ಹರಿಹರ, ಜ.7- ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಹರಿಹರ ಗ್ರಾಮಾಂತರ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು  ಗೋ ಪೂಜೆ ಮಾಡುವುದರ ಮೂಲಕ ಆರಂಭಿಸಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್ ಅವರು, ಪ್ರಧಾನಿ ನರೇಂದ್ರ ಮೋದಿಯವರು ನೂತನ ಕೃಷಿ ಮಸೂದೆಯನ್ನು ಜಾರಿಗೆ ತಂದಿದ್ದಾರೆ. ಇದು ರೈತರಿಗೆ ಅನುಕೂಲವಾಗಲಿದ್ದು, ರೈತರಿಗೆ ಅರಿವು ಮೂಡಿಸುವ ಜವಾಬ್ದಾರಿ ನಮ್ಮ ರೈತ ಮೋರ್ಚಾ ಪದಾಧಿಕಾರಿಗಳ ಮೇಲಿದೆ ಎಂದರು.

ಪ್ರಧಾನಿ ಮೋದಿ ಹಾಗೂ ಸಿ.ಎಂ. ಯಡಿಯೂರಪ್ಪ ಅವರುಗಳು ರೈತರಿಗೆ ಅನುಕೂಲವಾಗುವಂತಹ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದನ್ನು ಒಪ್ಪಿಕೊಳ್ಳದೇ ವಿರೋಧ ಪಕ್ಷದವರು, ಕೆಲವು ಸಂಘಟನೆಯವರು, ಕೆಲವು ರೈತರು, ಕಾಯ್ದೆ ಬಗ್ಗೆ ತಿಳಿಯದೆ ಪ್ರತಿಭಟನೆ ಮಾಡಿ, ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ನಾಗರಾಜ್ ಕಿಡಿ ಕಾರಿದರು.

ಹರಿಹರ ತಾಲ್ಲೂಕು ಗ್ರಾಮಾಂತರ ಘಟಕದ ಅಧ್ಯಕ್ಷ ಎಂ.ಪಿ.ಲಿಂಗರಾಜ್, ರೈತರು ನೂತನ ಕೃಷಿ ಮಸೂದೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಹರಿಹರ ಗ್ರಾಮಾಂತರ ಘಟಕದ ರೈತ ಮೋರ್ಚಾ ಅಧ್ಯಕ್ಷ ವೀರಣ್ಣ ಕೊಂಡಜ್ಜಿ ಮಾತನಾಡಿ, ನೂತನ ಕೃಷಿ ಮಸೀದಿಯು ಕೃಷಿ ಕ್ಷೇತ್ರದಲ್ಲಿ ರೈತರಿಗೆ ಹೆಚ್ಚಿನ ಲಾಭ ಸಿಗದೇ ಎಲ್ಲಾ ಮಧ್ಯವರ್ತಿಗಳ ಪಾಲಾಗುತ್ತಿತ್ತು. ಲಾಭವನ್ನೆಲ್ಲಾ ಮಧ್ಯವರ್ತಿಗಳು ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ಈ ಮಸೂದೆಯನ್ನು ಜಾರಿಗೆ ತಂದಿದ್ದಾರೆ. ಮಸೂದೆಗಳ ಅನ್ವಯ ರೈತರು ಎಪಿಎಂಸಿ ಮಂಡಿಯ ಹೊರತಾಗಿ, ಕಡಿಮೆ ಸುಂಕ, ಹೆಚ್ಚುವರಿ ಸುಂಕ, ದಲ್ಲಾಳಿಗಳಿಗೆ ಕಮೀಷನ್ ನೀಡದೆಯೇ ತಮಗೆ ಬೇಕಾದವರಿಗೆ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ನೂತನ ಕೃಷಿಯಿಂದ ಎಲ್ಲಾ ವರ್ಗದವರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.

ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಟಿ.ಕೆ.ವೀರೇಶ್, ಹರಿಹರ ತಾಲ್ಲೂಕು ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಮಾಜಿ ಶಾಸಕ ಬಿ.ಪಿ.ಹರೀಶ್, ಹರಿಹರ ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಮಹಾಂತೇಶ್, ವೀರೇಶ್ ಆದಾಪುರ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಲೋಕಿಕೆರೆ ಅಣ್ಣಪ್ಪ, ಹರೀಶ್ ಬೂದಿಹಾಳ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !!