ನೈರುತ್ಯ ರೈಲ್ವೆ : ಹರಿಹರ – ದೇವರಗುಡ್ಡ ನಿಲ್ದಾಣಗಳ ನಡುವೆ ಜೋಡಿ ಹಳಿ ಅನುಷ್ಠಾನ

ದಾವಣಗೆರೆ, ಜ.5- ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಹರಿಹರ-ದೇವರಗುಡ್ಡ ನಿಲ್ದಾಣಗಳ ನಡುವೆ (31 ಕಿ.ಮೀ) ಹೊಸದಾಗಿ ನಿರ್ಮಿಸಲಾದ ಜೋಡಿ ಹಳಿ ಮಾರ್ಗವನ್ನು  ನಿನ್ನೆ ಅನುಷ್ಠಾನಗೊಳಿಸ ಲಾಯಿತು. 

ಹರಿಹರ-ದೇವರಗುಡ್ಡ ನಿಲ್ದಾಣಗಳ ನಡುವಿನ ಈ ಜೋಡಿ ಹಳಿ  ಮಾರ್ಗವು  ಹುಬ್ಬಳ್ಳಿ ಮತ್ತು ಚಿಕ್ಕಜಾಜೂರು ನಡುವಿನ 190 ಕಿ.ಮೀ  ದ್ವಿಪಥೀಕರಣದ ಭಾಗವಾಗಿದೆ. ಈ ವಿಭಾಗದಲ್ಲಿ ಇಲ್ಲಿಯವರೆಗೆ ಅಕ್ಟೋಬರ್ 2018 ರಲ್ಲಿ ಅನುಷ್ಠಾನಗೊಂಡ ಚಿಕ್ಕಜಾಜೂರು-ತೋಳಹುಣಸೆ ನಡುವೆ 37 ಕಿ.ಮೀ ಮತ್ತು  ದಾವಣಗೆರೆ-ಹರಿಹರ ನಡುವೆ 2019 ರ ನವೆಂಬರ್‌ನಲ್ಲಿ ಕಾರ್ಯಾರಂಭ ಮಾಡಿದ 13 ಕಿ.ಮೀ ಸೇರಿದಂತೆ 81 ಕಿ.ಮೀ.ಗಳನ್ನು ಅನುಷ್ಠಾನಗೊಳಿಸಲಾಗಿದೆ. 

ರೈಲ್ವೆ ಸುರಕ್ಷತೆ ಆಯುಕ್ತರು (ಸಿಆರ್‌ಎಸ್) ದಕ್ಷಿಣ ವೃತ್ತ, 23.12.2020 ಮತ್ತು 24.12. 2020 ರಂದು ಹರಿಹರ-ದೇವರಗುಡ್ಡ ನಿಲ್ದಾಣಗಳ ನಡುವೆ ಹೊಸದಾಗಿ ಹಾಕಿದ ಡಬಲ್ ಲೈನ್‌ನ ಶಾಸನಬದ್ಧ ಪರಿಶೀಲನೆಯನ್ನು ಪೂರ್ಣಗೊಳಿಸಿ ದ್ದಾರೆ. ಎಲ್ಲಾ ನಾನ್ಇಂಟರ್‌ಲಾಕಿಂಗ್ ಮತ್ತು ಇಂಟರ್‌ಲಾಕಿಂಗ್ ಕಾರ್ಯಗಳು ಪೂರ್ಣಗೊಂಡ ನಂತರ, ಹರಿಹರ-ದೇವರಗುಡ್ಡ ನಿಲ್ದಾಣದ ನಡುವೆ 02.01.2020 ರಿಂದ ಜೋಡಿ ಹಳಿ  ಮಾರ್ಗವನ್ನು ಸಂಚಾರಕ್ಕೆ ತೆರೆಯಲಾಗಿದೆ.

ಸಿಆರ್‌ಎಸ್ ತಪಾಸಣೆ ಪೂರ್ಣಗೊಂಡ ನಂತರ 29.12.2020 ರಿಂದ ಇಂಟರ್ ಲಾಕಿಂಗ್ ಕೆಲಸಗಳು ಪ್ರಾರಂಭವಾಗಿ 02.01.2021 ರಂದು ಪೂರ್ಣಗೊಂಡಿವೆ. 2.2.2021 ರಂದು ಈ ವಿಭಾಗವು ಅನುಷ್ಠಾನವಾಗುವ ಮುನ್ನ ಈ ಕೆಳಗಿನ ಕಾರ್ಯಗಳು ಪೂರ್ಣಗೊಂಡಿವೆ.

ಕುಮಾರಪಟ್ಟಣ ಸೈಡಿಂಗ್ (9 ಮಾರ್ಗಗಳು) ನಲ್ಲಿ 29.12.2020 ರಂದು ಯಾರ್ಡ್ ಮರುನವೀಕರಣ ಮತ್ತು ವಿದ್ಯುನ್ಮಾನ ಅಂತರ್ಬಂಧ (ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್) ಬದಲಾವಣೆಯೊಂದಿಗೆ ಎರಡೂ ತುದಿಗಳಲ್ಲಿ ಜೋಡಿ ಹಳಿ ಅನುಷ್ಠಾನಗೊಳಿಸಲಾಯಿತು.

ಚಲಗೇರಿ (32 ಮಾರ್ಗಗಳು) ಯಲ್ಲಿ 30.12.2020 ರಂದು ಯಾರ್ಡ್ ಮರುನವೀಕ ರಣ ಮತ್ತು ವಿದ್ಯುನ್ಮಾನ ಅಂತರ್ಬಂಧ (ಎಲೆ ಕ್ಟ್ರಾನಿಕ್ ಇಂಟರ್‌ಲಾಕಿಂಗ್) ಬದಲಾವಣೆಯೊಂ ದಿಗೆ ಎರಡೂ ತುದಿಗಳಲ್ಲಿ ಜೋಡಿ ಹಳಿ ಕಾಮಗಾರಿ ಅನುಷ್ಠಾನಗೊಳಿಸಲಾಯಿತು.

ರಾಣೇಬೆನ್ನೂರು (34 ಮಾರ್ಗಗಳು) ನಲ್ಲಿ 31.12.2020 ರಂದು ಯಾರ್ಡ್ ಮರುನವೀಕ ರಣ ಮತ್ತು ವಿದ್ಯುನ್ಮಾನ ಅಂತರ್ಬಂಧ (ಎಲೆ ಕ್ಟ್ರಾನಿಕ್ ಇಂಟರ್‌ಲಾಕಿಂಗ್) ಬದಲಾವಣೆಯೊಂ ದಿಗೆ ಎರಡೂ ತುದಿಗಳಲ್ಲಿ ಜೋಡಿ ಹಳಿ ಕಾಮಗಾರಿ ಅನುಷ್ಠಾನಗೊಳಿಸಲಾಯಿತು.

ದೇವರಗುಡ್ಡ (32 ಮಾರ್ಗಗಳು)  ದಲ್ಲಿ 01.01.2021 ರಂದು ಯಾರ್ಡ್ ಮರುನವೀಕರಣ ಮತ್ತು ವಿದ್ಯುನ್ಮಾನ ಅಂತರ್ಬಂಧ (ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್) ಬದಲಾವಣೆಯೊಂದಿಗೆ ಎರಡೂ ತುದಿಗಳಲ್ಲಿ ಜೋಡಿ ಹಳಿ ಕಾಮಗಾರಿ ಅನುಷ್ಠಾನಗೊಳಿಸಲಾಯಿತು.

ಹರಿಹರ (141 ಮಾರ್ಗಗಳು) ದಲ್ಲಿ 02.01.2021 ರಂದು  24 ಹೆಚ್ಚುವರಿ ಪಾಯಿಂಟ್‌ಗಳು (ಹಳಿ ತಿರುಗಣಿ) ಮತ್ತು 33 ಹೊಸ ಟ್ರ್ಯಾಕ್ ಸರ್ಕ್ಯೂಟ್‌ಗಳೊಂದಿಗೆ ಅಸ್ತಿತ್ವದಲ್ಲಿದ್ದ 5 ಹಳಿ ಸಾಲುಗಳನ್ನು 7 ಸಾಲುಗಳಾಗಿ ಪ್ರಮುಖ ಯಾರ್ಡ್ ಮರುನವೀಕರಣ ಮತ್ತು ವಿದ್ಯುನ್ಮಾನ ಅಂತರ್ಬಂಧ (ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್) ಬದಲಾವಣೆಯೊಂದಿಗೆ ಎರಡೂ ತುದಿಗಳಲ್ಲಿ ಜೋಡಿ ಹಳಿ ಕಾಮಗಾರಿ ಅನುಷ್ಠಾನಗೊಳಿಸಲಾಯಿತು.

ಹರಿಹರ – ದೇವರಗುಡ್ಡ ವಿಭಾಗದ ಪ್ರಮುಖ ಲಕ್ಷಣಗಳು : ಹರಿಹರ ಯಾರ್ಡಿನಲ್ಲಿ ಒಂದು ಹೆಚ್ಚುವರಿ ಚಾಲನಾ ಹಳಿ ಮತ್ತು ಒಂದು ಹೆಚ್ಚುವರಿ ಸ್ಥಿರ ಹಳಿ ಮತ್ತು ಎರಡು ಪೂರ್ಣ ಉದ್ದದ ಶಂಟಿಂಗ್ ನೆಕ್‌ಗಳನ್ನು ನಿರ್ಮಿಸಲಾಗಿದೆ. 2.5 ಕಿ.ಮೀ ಯಾರ್ಡ್ ಮರುನವೀಕರಣ ಮಾಡಲಾಗಿದೆ. ಒಟ್ಟು 46 ಪಾಯಿಂಟ್‌ಗಳನ್ನು ಅಳವಡಿಸಲಾಗಿದೆ. ಇದು ರೈಲುಗಳ ಸತತ ಸಂಚಾರದ ಪರಿಸ್ಥಿತಿಗಳಲ್ಲಿ ಮಹತ್ತರವಾದ ಕೆಲಸವಾಗಿತ್ತು.

ದೇವರಗುಡ್ಡದಲ್ಲಿ ಎರಡು ಹೆಚ್ಚುವರಿ ಚಾಲನಾ ಹಳಿಗಳನ್ನು ಸೇರಿಸಲಾಯಿತು. ಕುಮಾರಪಟ್ಟಣಂ, ಚಲಗೇರಿ ಮತ್ತು ರಾಣೇಬೆನ್ನೂರಿನಲ್ಲಿ ತಲಾ ಒಂದು ಹೆಚ್ಚುವರಿ ಹಳಿಯನ್ನು ನಿರ್ಮಿಸಲಾಯಿತು.

ಚಲಗೇರಿ ಯಾರ್ಡಿನಲ್ಲಿ 450 ಮೀ ಉದ್ದದ 2 ಹೊಸ ಹೈ ಲೆವೆಲ್ ಐಲ್ಯಾಂಡ್ ಪ್ಲಾಟ್‌ಫಾರಂಗಳು ಮತ್ತು ದೇವರಗುಡ್ಡ ಯಾರ್ಡಿನಲ್ಲಿ  540 ಮೀ ಉದ್ದದ ಹೈ ಲೆವೆಲ್ ಎಂಡ್ ಪ್ಲಾಟ್‌ ಫಾರಂ ನಿರ್ಮಿಸಲಾಗಿದೆ. 

ನೈರುತ್ಯ ರೈಲ್ವೆ : ಹರಿಹರ - ದೇವರಗುಡ್ಡ ನಿಲ್ದಾಣಗಳ ನಡುವೆ ಜೋಡಿ ಹಳಿ ಅನುಷ್ಠಾನ - Janathavani

ಹರಿಹರದಲ್ಲಿ 170 ಮೀ ಉದ್ದದ ಎರಡು ಪ್ಲಾಟ್‌ಫಾರಂಗಳ ವಿಸ್ತರಣೆ, ಚಲಗೇರಿಯಲ್ಲಿ 120 ಮೀ ಉದ್ದದ ಒಂದು ಪ್ಲಾಟ್‌ಫಾರಂ, ಮತ್ತು ರಾಣೇಬೆನ್ನೂರಿನಲ್ಲಿ ತಲಾ 100 ಮೀ ಉದ್ದದ ಎರಡು ಪ್ಲಾಟ್‌ಫಾರಂಗಳನ್ನು ವಿಸ್ತರಿಸಲಾಗಿದೆ. ಟ್ರೋಲಿಗಳು / ಗಾಲಿ ಕುರ್ಚಿಗಳ ಚಲನೆಗಾಗಿ ಪ್ಲಾಟ್‌ಫಾರಂನ ಎರಡೂ ಬದಿಯಲ್ಲಿರುವ ಟ್ರಾಲಿ ಮಾರ್ಗವನ್ನು ಕಾಂಕ್ರೀಟ್‌ನಿಂದ ಸುಗಮಗೊಳಿಸಲಾಗಿದೆ.

ವಿಭಾಗದಲ್ಲಿ ROB / RUB ಕೆಲಸದ ನಿರ್ಮಾಣದ ನಂತರ ಲೆವೆಲ್ ಕ್ರಾಸಿಂಗ್ ಗೇಟ್‌ಗಳನ್ನು ಮುಚ್ಚಲಾಗಿದೆ.

ಆರ್‌ಒಬಿ ನಿರ್ಮಿಸಿ, ಲೆವೆಲ್ ಕ್ರಾಸಿಂಗ್ ಗೇಟ್‌ -208 ಮತ್ತು 213 ಮುಚ್ಚಲಾಗಿದೆ.

ಆರ್‌ಯುಬಿ ನಿರ್ಮಾಣದಿಂದ ಲೆವೆಲ್ ಕ್ರಾಸಿಂಗ್ ಗೇಟ್‌ -219 ಮತ್ತು 221 ಮುಚ್ಚಲಾಗಿದೆ.

ಹಳಿ ದ್ವಿಗುಣಗೊಳಿಸುವ ಭಾಗವಾಗಿ ಸಾರ್ವಜನಿಕ ಬೇಡಿಕೆಗೆ ಅನುಗುಣವಾಗಿ ಲೆವೆಲ್ ಕ್ರಾಸಿಂಗ್ ಗೇಟ್‌ 77 ಮತ್ತು 82 ರಲ್ಲಿ ಎರಡು ಹೊಸ ಆರ್‌ಯುಬಿಗಳನ್ನು ಸಹ ನಿರ್ಮಿಸಲಾಗಿದೆ.

ಯೋಜನೆಯ ಒಟ್ಟು ವೆಚ್ಚ ರೂ. 298 ಕೋಟಿ.

ತುಂಗಭದ್ರಾ ನದಿಯಲ್ಲಿ ನಿರ್ಮಿಸಲಾದ 16 ಸ್ಪ್ಯಾನ್‌ನ ಒಂದು ಪ್ರಮುಖ ಸೇತುವೆ.

ವಿಭಾಗದ ಜೋಡಿ ಹಳಿ ಕೆಲಸವನ್ನು ಮುಖ್ಯ ಆಡಳಿತಾಧಿ ಕಾರಿ / ಸಿಎನ್ ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ) ಕೆ.ಸಿ. ಸ್ವಾಮಿ ಇವರು ಯೋಜಿಸಿದ್ದರು. ಈ ಯೋಜನೆಯನ್ನು ಮುಖ್ಯ ಅಭಿಯಂತರ (ನಿರ್ಮಾಣ / ಉತ್ತರ) ನಾರಾಯಣ್ ರಾವ್ ಮತ್ತು ಮುಖ್ಯ ಸಂಕೇತ ಮತ್ತು ದೂರ ಸಂಪರ್ಕ ಅಭಿಯಂತರ (ನಿರ್ಮಾಣ) ಶಾಂತಿರಾಮ್ ಮತ್ತು ನಿರ್ಮಾಣ ಸಂಸ್ಥೆಯ ಇತರೆ ಅಧಿಕಾರಿಗಳು ದಕ್ಷವಾಗಿ ಕಾರ್ಯಗತಗೊಳಿಸಿದರು.

ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್‌ವಾಲ್, ಮೈಸೂರು ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಇಂಟರ್‌ಲಾಕ್ ಮಾಡುವ ಕಾರ್ಯವನ್ನು ಮೇಲ್ವಿಚಾರಣೆ ಮಾಡಿದರು.

ನೈರುತ್ಯ ರೈಲ್ವೆ  ಪ್ರಧಾನ ವ್ಯವಸ್ಥಾಪಕ ಅಜಯ್ ಕುಮಾರ್ ಸಿಂಗ್ ಈ ಕಾರ್ಯವನ್ನು ಶ್ಲ್ಯಾಘಿಸಿದ್ದು, ಇದು ಚಲನಶೀಲತೆ ಯನ್ನು ಹೆಚ್ಚು ಸುಧಾರಿಸುತ್ತದೆ. ವೇಗದ ರೈಲುಗಳನ್ನು ಓಡಿಸಲು ವಲಯವನ್ನು ಶಕ್ತಗೊಳಿಸಲು ಈ ದ್ವಿಪಥಗೊಳಿಸುವಿಕೆಯೊಂದಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಯಿತು. ಉಳಿದ ವಿಭಾಗದ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷದಲ್ಲಿ ಕಾರ್ಯಾರಂಭ ಮಾಡುವ ಗುರಿ ಹೊಂದಿದೆ ಎಂದು ಸಿಂಗ್ ಮಾಹಿತಿ ನೀಡಿದರು. 

ಸಾರ್ವಜನಿಕ ಬೇಡಿಕೆ ಮತ್ತು ಚುನಾಯಿತ ಪ್ರತಿನಿಧಿಗಳ ಮನವಿಗೆ ಸ್ಪಂದಿಸಿ, 2 ರಸ್ತೆ ಮೇಲ್ಸೇತುವೆ ಮತ್ತು 2 ರಸ್ತೆ ಕೆಳಸೇತುವೆಗಳನ್ನು ಈ ವಿಭಾಗದಲ್ಲಿ ನಿರ್ಮಿಸಲಾಗಿದ್ದು, ಇದು ರಸ್ತೆ ಬಳಕೆದಾರರಿಗೆ ಅನುಕೂಲವಾಗಲಿದೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುತ್ತದೆ.

error: Content is protected !!