ಹರಪನಹಳ್ಳಿ, ಮಾ.13-ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಾಗೃತಿ ವಾಹನದ ಮೂಲಕ ಅಂಗನವಾಡಿ ಶಿಕ್ಷಕರಿಗೆ, ಪ್ರೌಢಶಾಲಾ ಮಕ್ಕಳಿಗೆ ಬಾಲ್ಯ ವಿವಾಹ ನಿಷೇಧ ಕುರಿತು ಪ್ರತಿಜ್ಞೆ ಮಾಡಿಸಲಾಯಿತು. ಎಸಿಡಿಪಿಓ ರಾಮನಗೌಡ್ರು, ರೇಣುಕಾ ಜುಟ್ಲೆ, ಮೇಲ್ವಿಚಾರಕರಾದ ಸರೋಜ, ಕಂದಾಯ ಇಲಾಖೆ ಅಧಿಕಾರಿ ಅರವಿಂದ ಸಂಡೂರು ಮತ್ತು ಇತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
January 10, 2025