ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ
ರಾಣೇಬೆನ್ನೂರು, ಜ.2- ದೇಶದಲ್ಲಿ 10 ಕೋಟಿ, ರಾಜ್ಯದಲ್ಲಿ 40 ಲಕ್ಷ ಜನ ಸಂಖ್ಯೆ ಹೊಂದಿರುವ ನಾವು ಸಾಮಾಜಿಕ, ಆರ್ಥಿಕ, ರಾಜಕೀಯ ಮುಂತಾದ ಕ್ಷೇತ್ರಗ ಳಲ್ಲಿ ಅವಕಾಶ ಪಡೆಯಲು ಹೋ ರಾಟ ಮಾಡಬೇಕಿದೆ ಎಂದು ಮಹರ್ಷಿ ವಾಲ್ಮೀಕಿ ಗುರು ಪೀಠಾಧ್ಯಕ್ಷರಾದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
ಶ್ರೀ ಗಳು ಇಲ್ಲಿನ ಶ್ರೀ ಚೌಡೇಶ್ವರಿ ಸಭಾಭವನದಲ್ಲಿ ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ರಾಜ್ಯ ಸರ್ಕಾರ ಶೇ. 7.50 ಮೀಸಲಾತಿ ಕೊಡಲು ಸಲಹಾ ಸಮಿತಿ ರಚಿಸಿದೆ. ಸಮಿತಿ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತಲೇ ಮೀಸಲಾತಿ ದೊರಕುತ್ತದೆ ಎನ್ನುವ ಭರವಸೆಯೊಂದಿಗೆ, ಜಾತ್ರೆಗೆ ಬರಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಂದು ನಮಗೆ ಸಿಹಿ ಸುದ್ದಿ ಕೊಡಬಹುದು ಎನ್ನುವ ಆಶಯವನ್ನು ಶ್ರೀಗಳು ವ್ಯಕ್ತಪಡಿಸಿದರು.
ನಮ್ಮದು ನಾಲ್ಕನೇ ದೊಡ್ಡ ಸಮುದಾಯವಾಗಿದ್ದರೂ ಸಹ ಸಂಘಟನೆಯ ಕೊರತೆಯಿಂದಾಗಿ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಸಮಾಜವನ್ನು ವ್ಯವಸ್ಥಿತವಾಗಿ ಕಟ್ಟಲು, ನಮ್ಮ ಹಕ್ಕುಗಳ ಅರಿವು ಎಚ್ಚರಿಸಲು ಪ್ರತಿ ವರ್ಷ ವಾಲ್ಮೀಕಿ ಜಾತ್ರೆ ಮಾಡಲಾಗುತ್ತಿದೆ ಎಂದು ಶ್ರೀಗಳು ಹೇಳಿದರು.
ಜಾತ್ರೆಯ ಉಸ್ತುವಾರಿಗಾಗಿ ಜಿಲ್ಲಾ ಪಂಚಾಯ್ತಿಗೆ ಒಬ್ಬರಂತೆ ಕರೂರು ಕ್ಷೇತ್ರಕ್ಕೆ ಅಂಜು ನಾಗೇನಹಳ್ಳಿ, ತುಮ್ಮಿನಕಟ್ಟೆಗೆ ಕರಬಸಪ್ಪ ಕೂಲೇರ, ಮೆಡ್ಲೇರಿಗೆ ಬಸವರಾಜ ಚಳಗೇರಿ, ರಾಣೇಬೆನ್ನೂರಿಗೆ ಭೀಮಪ್ಪ ಎಡಚಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸಮಾಜದ ಮುಖಂಡರುಗಳಾದ ಹನುಮಂತಪ್ಪ ಬ್ಯಾಲದಹಳ್ಳಿ, ಶೇಖಪ್ಪ ಬೇಡರ, ರವೀಂದ್ರಗೌಡ ಪಾಟೀಲ, ಸಣ್ಣತಮ್ಮಪ್ಪ ಬಾರ್ಕಿ, ಬಸವರಾಜ ತಳವಾರ, ನಾಗಪ್ಪ ಕಾಡಜ್ಜಿ, ಜಯಪ್ಪ ಮಾಗನೂರ ಇನ್ನಿತರರಿದ್ದರು.