ದಾವಣಗೆರೆ, ಮಾ.13- ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ, ರಂಗ ಚೇತನ್ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರ ದೇವತೆ ಶ್ರೀ ದುರ್ಗಾಂಬಿಕಾ ಜಾತ್ರೆ ಪ್ರಯುಕ್ತ `ತವರು ಮನೆ’ ನಾಟಕವು ನಿಟುವಳ್ಳಿ ಆಂಜನೇಯ ಬಡಾವಣೆಯ ಶ್ರೀ ಆಂಜನೇಯ ದೇವಸ್ಥಾನದ ಹತ್ತಿರವಿರುವ 60 ಅಡಿ ರಿಂಗ್ ರಸ್ತೆಯಲ್ಲಿ ಇಂದು ರಾತ್ರಿ ಪ್ರದರ್ಶನಗೊಂಡಿತು. ಹಿರಿಯ ರಂಗಭೂಮಿ ಕಲಾವಿದ ಕೆ.ವೀರಯ್ಯ ಸ್ವಾಮಿ ಅವರ ತಂಡವು ಈ ನಾಟಕವನ್ನು ಪ್ರದರ್ಶಿಸಿತು.
January 10, 2025