ದಾವಣಗೆರೆ, ಜ.3- ಕುಂದುವಾಡ ಕೆರೆ ವಾಯುವಿಹಾರಿಗಳ ಬಳಗದಿಂದ ದಾವಣಗೆರೆಯಿಂದ ಹರಿಹರದ ಶ್ರೀ ಹರಿಹರೇಶ್ವರ ದೇವಸ್ಥಾನದವರೆಗೂ ನಡಿಗೆ ಜಾಥಾವನ್ನು ಇಂದು ನಡೆಸಲಾಯಿತು. ಈ ವಿಶೇಷ ಜಾಥಾದಲ್ಲಿ ಕ್ರೀಡಾಪಟುಗಳು, ಕುಸ್ತಿ ಪಟುಗಳು, ಹಿರಿಯ ನಾಗರಿಕರು, ದಾವಣಗೆರೆ ಯೋಗಪಟುಗಳು, ಸೈಕಲ್ ವಿಹಾರಿಗಳು ಹಾಗೂ ಮಹಿಳೆಯರು, ಪುಟಾಣಿ ಮಕ್ಕಳು ಸೇರಿದಂತೆ ನಗರದ ಎಲ್ಲಾ ಕಡೆಯ ವಾಯುವಿಹಾರಿಗಳು ಭಾಗವಹಿಸಿದ್ದರು. ದಾರಿ ಮಧ್ಯದಲ್ಲಿ ವಾಯುವಿಹಾರಿಗಳಿಗೆ ನೀರಿನ ವ್ಯವಸ್ಥೆ, ಡ್ರೈ ಫ್ರೂಟ್ಸ್, ಹೆಸರುಕಾಳು, ಕಡ್ಲೆಕಾಳು, ಚಾಕೋಲೆಟ್ಸ್, ಸಿಹಿ ತಿನಿಸುಗಳನ್ನು ಶ್ರೀ ರಾಮಕೃಷ್ಣಾಶ್ರಮದ ವತಿಯಿಂದ ವಿತರಿಸಲಾಯಿತು.
ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಪ್ರಾಣಾಯಾಮ ನಡೆಸಲಾಯಿತು. ದಾವಣಗೆರೆ ಲೆಕ್ಕ ಪರಿಶೋಧಕರ ಸಂಘದಿಂದ ಲಘು ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ವಾಯುವಿಹಾರಿಗಳ ಬಳಗದಿಂದ ದಾವಣಗೆರೆಗೆ ವಾಪಸ್ ಬರಲು ವಾಹನದ ವ್ಯವಸ್ಥೆ ಮಾಡಿದ್ದರು. 38ನೇ ವಾರ್ಡ್ನ ಪಾಲಿಕೆ ಸದಸ್ಯ ಮಂಜುನಾಥ ಗಡಿಗುಡಾಳ್ ಜಾಥಾದಲ್ಲಿ ಪಾಲ್ಗೊಂಡಿದ್ದರು.