ಮಲೇಬೆನ್ನೂರು, ಮಾ.10- ವಡೆಯರ ಬಸವಾಪುರ ಗ್ರಾಮದ ಶ್ರೀ ಬಸವೇಶ್ವರ ದೇವರ ರಥೋತ್ಸವ ಗುರುವಾರ ಬೆಳಗ್ಗೆ ಸಂಭ್ರಮದಿಂದ ಗ್ರಾಮ ಸ್ಥರ ಸಮ್ಮುಖದಲ್ಲಿ ಜರುಗಿತು.
ಅತಿ ಚಿಕ್ಕ ಗ್ರಾಮ ವಾದ ಈ ಊರಿನ ತೇರಿಗೆ ಹೊರಗಿನ ಭಕ್ತರ ಸಂಖ್ಯೆ ಬಹಳ ಕಡಿಮೆ ಇರುವುದರಿಂದ ಗ್ರಾಮಸ್ಥರೇ ಹಾಜರಿದ್ದು, ರಥೋತ್ಸವ ನಡೆಸುತ್ತಾರೆ. ಈ ಬಾರಿ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಗ್ರಾಮಸ್ಥರ ಕೋರಿಕೆ ಮೇರೆಗೆ ರಥೋತ್ಸವದಲ್ಲಿ ಭಾಗವಹಿಸಿದ್ದರು.
ನಂದಿ ಸೌಹಾರ್ದ ಸಹಕಾರಿ ಅಧ್ಯಕ್ಷ ಜಿಗಳಿ ಇಂದೂಧರ್, ಗ್ರಾಮದ ಎಂ. ಕರಿಬಸಯ್ಯ, ಹೆಚ್.ಮಹಾಂತಯ್ಯ, ಆನಂದಯ್ಯ, ವೀರಭದ್ರಯ್ಯ, ಕರಿಬಸಯ್ಯ, ಮಲ್ಲಯ್ಯ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು. ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಕೂಡ ತೇರಿನಲ್ಲಿ ಭಾಗಿಯಾಗಿದ್ದರು. ಸಂಜೆ ಓಕುಳಿ ನಂತರ ಭದ್ರಾವತಿಯ ತೃಪ್ತಿ ಮೆಲೋಡಿಯಸ್ ಆರ್ಕೆಸ್ಟ್ರಾ ಇವರಿಂದ ನಡೆದ ರಸಮಂಜರಿ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು.
ಇದ್ದಕ್ಕೂ ಮುನ್ನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಪಿ.ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಭದ್ರಾ ಕಾಡಾ ಸದಸ್ಯ ಗೋವಿನಹಾಳ್ ರಾಜಣ್ಣ, ದಿಶಾ ಕಮಿಟಿ ಸದಸ್ಯ ಐರಣಿ ಅಣ್ಣಪ್ಪ, ಪತ್ರಕರ್ತ ಜಿಗಳಿ ಪ್ರಕಾಶ್, ಗ್ರಾ.ಪಂ ಸದಸ್ಯ ಎ.ಕೆ.ಹನುಮಂತಪ್ಪ, ಶಿಕ್ಷಕ ಜಿಗಳಿ ಕರಿಬಸಯ್ಯ ಮತ್ತಿತರರು ಭಾಗವಹಿಸಿದ್ದರು.