ದಾವಣಗೆರೆ, ಫೆ. 23- ನಗರದ ಪದ್ಮಾಂಬ ಜೈನ್ ಮಹಿಳಾ ಸಮಾಜದಿಂದ ಬೂದಾಳ್ ರಸ್ತೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಡ ಮಕ್ಕಳಿಗೆ ತಟ್ಟೆ ಹಾಗೂ ಕಾರ್ಡ್ ಬೋರ್ಡ್ ವಿತರಿಸಲಾಯಿತು.
ಸಮಾಜದ ಸಂಸ್ಥಾಪಕರಾದ ಉಷಾ ಜಯಪ್ರಕಾಶ್, ಅಧ್ಯಕ್ಷರಾದ ಕವಿತಾ ಧರಣೀಂದ್ರ ಪ್ರಸಾದ್ ನಿರ್ದೇಶಕ ರಾದ ಮಮತಾ ಸಂಪತ್, ಕಾರ್ಯದರ್ಶಿ ಕುಸುಮಾ ಸುನೀಲ್, ಖಜಾಂಚಿ ಚೇತನ ಪದ್ಮರಾಜ್, ಉಪಾಧ್ಯಕ್ಷ ರಾದ ವರ್ಷ ಹುಲಿ, ಸಹ ಕಾರ್ಯದರ್ಶಿ ಸುಷ್ಮಾ ಮೋಹನ್ ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು.