ರಾಣೇಬೆನ್ನೂರು: ವೀರಭದ್ರೇಶ್ವರ ಸ್ವಾಮಿ ಗುಗ್ಗಳ ಮಹೋತ್ಸವ

ರಾಣೇಬೆನ್ನೂರು,ಫೆ.23- ಇಲ್ಲಿನ ವಾಗೀಶ ನಗರದ ಶ್ರೀ ವೀರಭದ್ರ ದೇವಸ್ಥಾನದಲ್ಲಿ ಶರಭಿ ಗುಗ್ಗಳ ಮಹೋತ್ಸವ ಮಂಗಳವಾರ ಶದ್ಧಾ – ಭಕ್ತಿಯಿಂದ ನಡೆಯಿತು. 

ಇಲ್ಲಿನ ಮೃತ್ಯುಂಜಯನಗರದ ಆದಿಶಕ್ತಿ ದೇವಸ್ಥಾನದ ಅರ್ಚಕ ಸೋಮಯ್ಯಸ್ವಾಮಿ  ಅವರ ಮನೆಯಿಂದ ಶರಭಿ ಗುಗ್ಗಳ ಹಾಗೂ ಪಾಲಕಿ ಉತ್ಸವ ಸಕಲ ವಾದ್ಯಗಳೊಂದಿಗೆ ಪ್ರಾರಂಭವಾಯಿತು. ಮಾರುತಿ ನಗರದ ಬಸವಣ್ಣೆಪ್ಪ ಅಟವಾಳಗಿ ಸಹೋದರರು ವೀರಗಾಸೆ ಮತ್ತು ಪುರುವಂತಿಕೆ ನಡೆಸಿಕೊಟ್ಟರು.

ಚನ್ನೇಶ್ವರ ಮಠದ ಸಂಸ್ಕೃತ ಪಾಠ ಶಾಲೆಯ ವಟುಗಳು ವೇದ ಘೋಷ ಮಾಡಿದರು. ಹಿರೇ ಕೆರೂರು ತಾಲ್ಲೂಕಿನ ನಿಟ್ಟೂರ ಗ್ರಾಮದ ಸುಭ ದ್ರಮ್ಮ ಗದಿಗೆಪ್ಪ ಪುರದಾಳ ಹಾಗೂ ಕುಟುಂಬ ದವರು ಶರಭಿ ಗುಗ್ಗಳ ಸೇವೆ ನಡೆಸಿಕೊಟ್ಟರು. 

ಹೊನ್ನಾಳಿ ಹಿರೇಕಲ್ಮಠದ ಒಡೆಯರ ಡಾ.ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಶರಭಿ ಗುಗ್ಗಳ ಮಹೋತ್ಸವಕ್ಕೆ ಚಾಲನೆ ನೀಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ವೀರೇಶ (ರಾಜಣ್ಣ) ಮೋಟಗಿ ಅಧ್ಯಕ್ಷತೆ ವಹಿಸಿದ್ದರು.

ನಗರಸಭೆ ಅಧ್ಯಕ್ಷರಾದ ರೂಪಾ ಚಿನ್ನಿಕಟ್ಟಿ, ಸಾಧು ಲಿಂಗಾಯತ ಸಮಾಜದ ಅಧ್ಯಕ್ಷ ಶಿವಣ್ಣ ನಂದೀಹಳ್ಳಿ, ಪಂಚಮಸಾಲಿ ಸಮಾಜದ ಅಧ್ಯಕ್ಷ ಸಿದ್ದು ಚಿಕ್ಕಬಿದರಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವೀರೇಶ ಜಂಬಿಗಿ, ವರ್ತಕರಾದ ಪ್ರಕಾಶ ಗುಪ್ತಾ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಎಸ್‌.ಕೆ. ಉಪ್ಪಿನ, ವೀರಣ್ಣ ಪಟ್ಟಣಶೆಟ್ಟಿ ಅವರನ್ನು ಸ್ವಾಮೀಜಿ ಸನ್ಮಾನಿಸಿದರು. 

ವಿಧಾನಸಭೆ ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ, ಸಂಗನಬಸಪ್ಪ (ಬಾಬು) ಐರಣಿ, ಎಸ್‌.ಎಸ್‌.ರಾಮಲಿಂಗಣ್ಣನವರ, ಬಿ.ಎಸ್‌.ಪಟ್ಟಣಶೆಟ್ಟಿ, ಎಂ. ಸಿದ್ದಲಿಂಗಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!