ಮಲೇಬೆನ್ನೂರು, ಫೆ.20- ಇಲ್ಲಿನ ಪುರಸಭೆ ಕಚೇರಿಯಲ್ಲಿ ಕವಿ, ವಚನಾಕಾರ, ಸರ್ವಜ್ಞ ಜಯಂತಿಯನ್ನು ಭಾನುವಾರ ಆಚರಿಸಲಾಯಿತು. ಕಾರ್ಯಕ್ರಮ ಕುರಿತು ಮಾತನಾಡಿದ ಪುರಸಭೆ ಸದಸ್ಯ ಸಾಬೀರ್ ಅಲಿ ಅವರು ಸರ್ವಜ್ಞ ಒಬ್ಬ ಮಹಾನ್ ಕವಿ, ತತ್ವಜ್ಞಾನಿ, ವಾಸ್ತವವಾದಿ, ನೇರವಾಗಿ ವಾಸ್ತವಕ್ಕೆ ತಕ್ಕಂತೆ ವಚನಗಳನ್ನು ರಚಿಸುತ್ತಿದ್ದರು. ಬಸವ ಗುರುವಿನ ಹೆಸರು ಬಲ್ಲವರಾರಿಲ್ಲ ಎಂದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭೋವಿ ಕುಮಾರ್, ಪುರಸಭೆ ಸದಸ್ಯರಾದ ಭೋವಿ ಶಿವು, ದಾದಾಪೀರ್, ಪುರಸಭೆ ಸಿಬ್ಬಂದಿಗಳಾದ ಮುಮ್ತಾಜ್, ಗಣೇಶ್, ರೋಹಿತ್ ಮತ್ತಿತರರು ಉಪಸ್ಥಿತರಿದ್ದರು.
February 25, 2025