ದಾವಣಗೆರೆ, ಫೆ.7- ದಾವಣಗೆರೆ ವಿಶ್ವವಿದ್ಯಾಲಯದ 2020-21ನೇ ಸಾಲಿನ ಪದವಿ ಪರೀಕ್ಷೆಯಲ್ಲಿ ನಗರದ ದವನ್ ಕಾಲೇಜಿಗೆ ಶೇ.95ರಷ್ಟು ಫಲಿತಾಂಶದೊಂದಿಗೆ ಬಿ.ಕಾಂ, ಬಿ.ಬಿ.ಎಂ. ಬಿಸಿಎ ಪದವಿಯಲ್ಲಿ 8 ರಾಂಕ್‌ಗಳನ್ನು ಪಡೆದಿದ್ದು, ಇದು ಜಿಲ್ಲೆಯಲ್ಲಿಯೇ ಅತ್ಯಧಿಕ ರಾಂಕ್‍ಗಳನ್ನು ಪಡೆದ ಕಾಲೇಜು ಎಂಬ ಹೆಗ್ಗಳಿಕೆಗೆ ದವನ್ ಪಾತ್ರವಾಗಿದೆ.
ಬಿ.ಬಿ.ಎಂ. ಪದವಿಯಲ್ಲಿ ಗುಂಜನ್ ಆರ್.ಜೈನ್ 3ನೇ ರಾಂಕ್, ದಿಶನಾ ಕೆ.ಜೈನ್ 4ನೇ ರಾಂಕ್, ಕೆ. ಅಕ್ಷತಾ 5ನೇ
ರಾಂಕ್, ಕುಂದನ್ ಡಿ.ಜೈನ್ 8ನೇ ರಾಂಕ್, ದರ್ಶಿತಾ ಎಸ್.ಜೈನ್ 10ನೇ ರಾಂಕ್ ಮತ್ತು ಬಿ.ಸಿ.ಎ ಪದವಿಯಲ್ಲಿ ವಿನಯ್ ಎಸ್.ಎಂ 4ನೇ ರಾಂಕ್, ಕಾವ್ಯ ಬಿ.ಎಸ್. 10ನೇ ರಾಂಕ್ ಹಾಗೂ ಬಿ.ಕಾಂ. ಪದವಿಯಲ್ಲಿ ರಶ್ಮಿ ಡಿ.ಎಸ್. 4ನೇ ರಾಂಕ್ ಪಡೆದಿರುತ್ತಾರೆ.
ರಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿ–ವಿದ್ಯಾರ್ಥಿನಿಯರನ್ನು ಸಂಸ್ಥೆಯ ಕಾರ್ಯದರ್ಶಿ ವೀರೇಶ್ ಪಟೇಲ್, ಜಂಟಿ ಕಾರ್ಯದರ್ಶಿ ಡಾ. ಜಿ.ಎಸ್. ಅಂಜು, ನಿರ್ದೇಶಕರಾದ ಹರ್ಷರಾಜ್ ಎ.ಗುಜ್ಜರ್, ಶೈಕ್ಷಣಿಕ ಸಲಹೆಗಾರ ಪ್ರೊ. ಬಾತಿ ಬಸವರಾಜ್, ಉಪ ಪ್ರಾಚಾರ್ಯರಾದ ಶ್ರೀಮತಿ ಎನ್. ಅನಿತಾ, ಬಿಬಿಎ ವಿಭಾಗದ ಮುಖ್ಯಸ್ಥ ಪ್ರೊ. ಶಂಕರ್, ಬಿ.ಕಾಂ ವಿಭಾಗದ ಮುಖ್ಯಸ್ಥ ಪ್ರೊ. ಚಂದನ್, ಕಛೇರಿ ಮುಖ್ಯಸ್ಥರಾದ ಮಧುಕರ್ ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.