ಸಮಾಜದಲ್ಲಿ ಮಡಿವಾಳರ ಕಾಯಕ ಅತ್ಯಂತ ಶ್ರೇಷ್ಠ

ಹರಪನಹಳ್ಳಿ : ಜಿ.ಪಂ. ಮಾಜಿ ಸದಸ್ಯ ಹರ್ಷವರ್ಧನ

ಹರಪನಹಳ್ಳಿ, ಫೆ.6- ಮಡಿವಾಳ ರೆಂಬ ಕೀಳರಿಮೆ ಬಿಟ್ಟು ತಮ್ಮ ವೃತ್ತಿಯನ್ನು ಆಧುನಿಕರಣಗೊಳಿಸಿ ಸಮಾಜದ ಮುಖ್ಯವಾಹಿನಿಗೆ ಬಂದಾಗ ಮಾತ್ರ ಶರಣ ಮಾಚಿದೇವರ ಹೋರಾಟಕ್ಕೆ ಫಲ ಸಿಕ್ಕಾಗುತ್ತದೆ ಎಂದು ಉಜ್ಜಿನಿ ಜಿ.ಪಂ. ಮಾಜಿ ಸದಸ್ಯ ಹರ್ಷವರ್ಧನ ಹೇಳಿದರು.

ಪಟ್ಟಣದ ಮಡಿವಾಳರ ಮಾಚಿದೇವ ದೇವಾಲಯದಲ್ಲಿ ಕೊರೊನಾ ಹಿನ್ನಲೆಯಲ್ಲಿ ಸರಳವಾಗಿ ಆಯೋಜಿಸಿದ್ದ ಮಾಚಿದೇವ ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜದಲ್ಲಿ ಮಡಿವಾಳರ ಕಾಯಕ ಅತ್ಯಂತ ಶ್ರೇಷ್ಠವಾದುದು. ಈ ವೃತ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈತ ಕ್ರಾಂತಿಕಾರಕ ವಚನಕಾರನಾಗಿದ್ದನ್ನು ಇತಿಹಾಸ ತಿಳಿಸುತ್ತದೆ ಎಂದರು.

ಪಟ್ಟಣದಲ್ಲಿ ನಿಮ್ಮ ಸಮುದಾಯಕ್ಕೆ, ದೋಬಿಘಾಟ್ ಸಮುದಾಯ ಭವನ, ದೇವಾಲಯಕ್ಕೆ ಗೋಪುರ ನಿರ್ಮಾಣಕ್ಕೆ ತಾವು ಹಾಗೂ ಶಾಸಕ ಭೀಮಾನಾಯ್ಕ ಅವರಿಂದ ನೆರವು ಕೊಡಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹರ್ಷವರ್ಧನ. ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ರಾಮಣ್ಣ, ಪತ್ರಕರ್ತ ಉಜ್ಜಿನಿ ರುದ್ರಪ್ಪ ಅವರನ್ನು ಮಡಿವಾಳ ಸಮಾಜದಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮಡಿವಾಳ ಸಮಾಜದ ಮುಖಂಡ ನಾಗೇಂದ್ರಪ್ಪ ಮತ್ತು ತಾಲ್ಲೂಕು ಮಡಿವಾಳ ಸಮಾಜದ ಅಧ್ಯಕ್ಷರಾದ ಭೀಮಪ್ಪ ಮಾತನಾಡಿದರು.

ಗೌರವಾಧ್ಯಕ್ಷ ಕೊಟ್ರೇಶಪ್ಪ, ಖಜಾಂಚಿ ಬಸವರಾಜ್, ಕಾರ್ಯದರ್ಶಿ ಎಂ ಸುರೇಶ್, ಮಡಿವಾಳ ಸಮಾಜದ ಮುಖಂಡರಾದ ಗುರುಬಸವರಾಜ್, ತೋಟದ ರಾಮಪ್ಪ, ಶಂಕರ್, ಗುರು,  ವಿರೂಪಾಕ್ಷಪ್ಪ ಮತ್ತಿತರರಿದ್ದರು.

error: Content is protected !!