ಹಣ ಕೊಡಿಸಿದ ಮುಖಂಡರು, ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಅನ್ನದಾತರಿಂದ ಅಭಿನಂದನಾ ಸನ್ಮಾನ
ದಾವಣಗೆರೆ ಜ. 13 – ಮೆಕ್ಕೆಜೋಳ ಖರೀದಿಸಿದ ಹಣವನ್ನು ರೈತರು ಹಾಗೂ ವರ್ತಕರಿಗೆ ನೀಡದೇ ವಂಚಿಸಿದ್ದ ವ್ಯಕ್ತಿಯಿಂದ 2.68 ಕೋಟಿ ರೂ. ವಸೂಲಿ ಮಾಡಿ, ರೈತರಿಗೆ ಕೊಡಿಸಲು ಕಾರಣಕರ್ತರಾದ ಮುಖಂಡರು, ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ವಕೀಲರಿಗೆ ರೈತರು ಜಿಲ್ಲಾಡಳಿತ ಭವನದಲ್ಲಿ ಮೂಡಿದೆ ಎಂದರು.
ಕೆರೆ ತುಂಬಿಸುವ ಯೋಜನೆಗಳು ಎರಡು ಕೂಸುಗಳಿದ್ದಂತೆ. ಭರಮಸಾಗರ ಯೋಜನೆ ಮೊದಲು ಜನಿಸಿದ ಕೂಸು ಜಗಳೂರು ಕೆರೆ ತುಂಬಿಸುವ ಯೋಜನೆ ಎರಡನೇ ಕೂಸು ಜೂನ್ ವೇಳೆಗೆ ಜನಿಸಲಿದೆ ಎಂದರು.
22 ಕೆರೆ ಯೋಜನೆಯ ಲೋಪ ದೋಷಗಳು ಈ ಯೋಜನೆಗಳಲ್ಲಿ ಕಂಡುಬರುವುದಿಲ್ಲ. ಜಗಳೂರು ಕ್ಷೇತ್ರದ ಕೆರೆ ತುಂಬಿಸುವ ಯೋಜನೆ ಭರಮಸಾಗರ ಯೋಜನೆಗಿಂತ ವಿಶಿಷ್ಟವಾಗಿದೆ. ಚಟ್ನಹಳ್ಳಿ ಗುಡ್ಡದ ಮೇಲಿನಿಂದ ಗುರುತ್ವಾಕರ್ಷಣೆ ಬಲದಿಂದ ತಾಲ್ಲೂಕಿನ 53 ಕೆರೆಗಳಿಗೆ ನೀರು ಹರಿಯಲಿದೆ ಎಂದರು.
ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ರೈತಪರವಾಗಿರುವ ಶ್ರೀಗಳ ಕಾಳಜಿ, ಇಚ್ಛಾಶಕ್ತಿಯಿಂದ ಭರಮಸಾಗರ ಕೆರೆಯಿಂದ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಯುತ್ತಿವೆ. ಶ್ರೀಗಳ ಆಶಯದಂತೆ ನೀರಾವರಿ ನಾಡನ್ನಾಗಿಸುವ ಬಹುದಿನದ ಕನಸು ನನಸಾಗುವುದು ಖಚಿತ. ಜೂನ್ ತಿಂಗಳ ಒಳಗಾಗಿ ತುಪ್ಪದಹಳ್ಳಿ ಸೇರಿದಂತೆ ಒಂದೇ ತಿಂಗಳಲ್ಲಿ 18 ಕೆರೆಗಳು ಭರ್ತಿಯಾಗಲಿವೆ ಎಂದು ಭರವಸೆ ನೀಡಿದರು.
1974ರಲ್ಲಿ ನೈಸರ್ಗಿಕವಾಗಿ ಕೆರೆ ಕೋಡಿ ಬಿದ್ದು ನೀರು ಹರಿದಿತ್ತು. 2021 ರಲ್ಲಿ ತುಂಗಭದ್ರಾ ಏತ ನೀರಾವರಿ ಯೋಜನೆ ಮೂಲಕ ಕೆರೆ ಕೋಡಿ ಬಿದ್ದು ತಾಲ್ಲೂಕಿನ ತುಪ್ಪದಹಳ್ಳಿ ಕೆರೆಗೆ ನೀರು ಹರಿಯುತ್ತಿರುವುದು ಸಿರಿಗೆರೆ ಶ್ರೀಗಳ ಕೊಡುಗೆ ಎಂದು ಸಂತಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್, ಜಗಳೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಅಂತರ್ಜಲ ಕುಸಿತವಾಗಿದ್ದು, ಕೆರೆಗಳು ಭರ್ತಿಯಾದರೆ ಭವಿಷ್ಯದ ಪೀಳಿಗೆಗೆ ಅನುಕೂಲವಾಗಲಿದೆ. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯಬೇಕಿದೆ. ಬೆಳೆ ವಿಮೆ ಸಮರ್ಪಕ ಜಾರಿಯಾದರೆ ರೈತರ ಆರ್ಥಿಕ ಸಂಕಷ್ಟ ದೂರಾಗಲಿವೆ ಎಂದು ಹೇಳಿದರು.
ಕಲ್ಲು-ಮುಳ್ಳು ಲೆಕ್ಕಿಸದೆ ನಡೆದ ಶ್ರೀಗಳು: ಬಿಳಿಚೋಡು ಗ್ರಾಮದ ಹಳ್ಳದಲ್ಲಿನ ಚೆಕ್ ಡ್ಯಾಂಗೆ ಸಂಪರ್ಕಿಸಲು ಸಮರ್ಪಕ ರಸ್ತೆಯಿಲ್ಲದೆ. ತಾತ್ಕಾಲಿಕ ಜೆಸಿಬಿ ಯಂತ್ರದಿಂದ ಮುಳ್ಳಿನ ಗಿಡ ಸ್ವಚ್ಛತೆಗೊಳಿಸ ಲಾಗಿತ್ತು. ಆದರೆ, ಶ್ರೀಗಳು ಕಲ್ಲು ಮುಳ್ಳು ಲೆಕ್ಕಿಸದೆ ನಡೆದು ನೀರಿನಲ್ಲಿ ತೆರಳಿ ನೀರಿನ ಹರಿವು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಶಶಿಕುಮಾರ್, ನಿವೃತ್ತ ಉಪನ್ಯಾಸಕ ಸುಭಾಶ್ಚಂದ್ರ ಬೋಸ್, ಮಹೇಶ್, ನಾಗನಗೌಡ, ಬೀರೇಶ್, ಗೌಡ್ರು ಶರಣಪ್ಪ, ಬಸವಾಪುರ ರವಿಚಂದ್ರ, ಗಿರೀಶ್ ಒಡೆಯರ್, ಚಂದ್ರನಾಯ್ಕ ಸೇರಿದಂತೆ ಇತರರು ಭಾಗವಹಿಸಿದ್ದರು.