ಹರಿಹರ, ಜ.11- ನಗರದ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಗೆಲುವಿಗಾಗಿ ಸಣಸಾಡುತ್ತಿರುವ ಕುಸ್ತಿ ಪಟುಗಳು. ಈ ವೇಳೆ ಕಾಗಿನೆಲೆ ಕನಕ ಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಸ್ವಾಮಿಗಳು ತಡರಾತ್ರಿವರೆಗೆ ಕುಸ್ತಿ ವೀಕ್ಷಿಸಿ ಕ್ರೀಡಾ ಪಟುಗಳಿಗೆ ಪ್ರೋತ್ಸಾಹಿಸಿದರು.
ತಾ. ಕುಸ್ತಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ಪೈಲ್ವಾನ್ ಅಣ್ಣಯ್ಯಪ್ಪ, ಪೈಲ್ವಾನ್ ಸುರೇಶ್ ಚಂದಪೂರ್, ಪೈಲ್ವಾನ್ ರೇವಣಪ್ಪ, ಜಗದೀಶ್ ಚೂರಿ, ಪೈಲ್ವಾನ್ ಆಸೀಫ್, ನಗರಸಭೆ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ, ನಗರಸಭೆ ಸದಸ್ಯ ಕೆ.ಜಿ. ಸಿದ್ದೇಶ್ ಹಾಜರಿದ್ದರು.