ರಾಣೇಬೆನ್ನೂರು, ಜ. 5- ಸುದೀರ್ಘ 22 ವರ್ಷಗಳ ಕಾಲ ಭಾರ ತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಮರಳಿ ಮನೆಗೆ ಆಗಮಿಸಿದ ರಾಣೇಬೆನ್ನೂರು ತಾಲ್ಲೂಕು ಲಿಂಗದ ಹಳ್ಳಿ ಗ್ರಾಮದ ಪಕ್ಕೀರಪ್ಪ ದುರಗಪ್ಪ ಮಾಗನೂರ ಅವರು 1997-98 ರಲ್ಲಿ ನಡೆದ ಸೇನಾ ಭರ್ತಿಗೆ ಆಯ್ಕೆ ಯಾಗಿ ಜಮ್ಮ-ಕಾಶ್ಮೀರ, ಅಯೋಧ್ಯಾ, ಹಿಮಾಚಲ ಪ್ರದೇಶ, ಜಾರ್ಖಂಡ ನಲ್ಲಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಹೊಂದಿ ಜಾರ್ಖಂಡ್‌ನಿಂದ ಸ್ವ ಗ್ರಾಮಕ್ಕೆ ಆಗಮಿಸುವ ಮುನ್ನ ಮಂಗ ಳವಾರ ರಾಣೇಬೆನ್ನೂರಿನ ರೈಲ್ವೆ ನಿಲ್ದಾಣದಿಂದ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು.
ವಿವಿಧ ರೈತ ಪರ, ಕನ್ನಡ ಪರ ಸಂಘಟನೆಗಳು, ನ್ಯಾಯವಾದಿಗಳು, ಮಾಗೋಡ-ಇಟಗಿ-ಮುಷ್ಠೂರು-ಮಣಕೂರ ಗ್ರಾಮಗಳ ಶಾಲಾ ಮಕ್ಕಳು, ಮತ್ತು ಗ್ರಾಮದ ನಾಗರಿಕರು ಗೌರವ ವಂದನೆ ಸಲ್ಲಿಸಿದರು.
ನಗರದ ಬಸ್ ನಿಲ್ದಾಣದ ಹತ್ತಿರ ವೀರ ಯೋಧ ಪಕ್ಕೀರಪ್ಪನಿಗೆ ಹಸಿರು ಶಾಲು ಹೊದಿಸಿ, ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಮಾತನಾಡಿ, ದೇಶ ಸೇವೆ ಸಲ್ಲಿಸಿದ ಪಕ್ಕೀರಪ್ಪನವರು ಇನ್ನು ಮುಂದೆ ಕೃಷಿಕ ನಾಗಿ ಕೃಷಿ ವಲಯದಲ್ಲಿ ಸಾಧ ನೆಗೈದು ರೈತಾಪಿ ವರ್ಗದವರ ಏಳಿ ಗೆಗೆ ಶ್ರಮಿಸಿ ರೈತರ ಹೋರಾಟದಲ್ಲಿ ಭಾಗಿ ಯಾಗಲೆಂದರಲ್ಲದೇ ನಾಗರಿಕರ ಪ್ರೀತಿಯ ಸ್ವಾಗತಕ್ಕೆ ಮೆಚ್ಚಿ ಪ್ರತಿಯೊಂದು ಕುಟುಂಬದಲ್ಲೂ ಈ ಪಕ್ಕೀರಪ್ಪನಂತಹ ವೀರ ಯೋಧರು ಜನಿಸಿ ಈ ಭಾರತಾಂ ಭೆಯ ಸೇವೆ ಮಾಡಲೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಂಜುನಾಥ ಗೌಡ ಶಿವಣ್ಣವರ, ಎಸ್.ಡಿ. ಹಿರೇಮಠ, ಬಸವರಾಜ ಕೊಂಗಿಯವರ, ಚಂದ್ರಣ್ಣ ಬೇಡರ, ಅಶೋಕ ನಾಯಕ, ನಾಗಣ್ಣ ಟಿ., ಕರಬಸಪ್ಪ ಓಲೇರ ಮುಂತಾದವರು ಭಾಗವಹಿಸಿದ್ದರು.