ಬ್ಯಾರಿಕೇಡ್‌ ತೆರವುಗೊಳಿಸುವಂತೆ ವ್ಯಾಪಾರಸ್ಥರ ಒತ್ತಾಯ

ದಾವಣಗೆರೆ, ಜ.5- ನಗರದ ರೇಣುಕಾ ಮಂದಿರದ ಬಳಿ ಸಂಚಾರ ಪೊಲೀಸ್‌ ಇಲಾಖೆಯಿಂದ ಇಡಲಾಗಿರುವ ಬ್ಯಾರಿಕೇಡ್‌ಗಳನ್ನು ತೆರವು ಮಾಡಿ, ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ವಹಿಸಲು ಅಕ್ಕಮಹಾದೇವಿ ರಸ್ತೆ ಹಾಗೂ ಪಿ.ಬಿ. ರಸ್ತೆ ವ್ಯಾಪಾರಿಗಳು ನಗರ ಪೊಲೀಸ್‌ ಉಪಾಧೀಕ್ಷಕ ನರಸಿಂಹ ತಾಮ್ರಧ್ವಜ ಅವರನ್ನು ಭೇಟಿ ಮಾಡಿದರು. 

ಬ್ಯಾರಿಕೇಡ್‌ ಅಳವಡಿಕೆಯಿಂದ ವ್ಯಾಪಾರ ಕುಸಿದಿದೆ. ಬಸ್‌, ಲಾರಿಗಳ ವೇಗಕ್ಕೆ ಕಡಿವಾಣ ಹಾಕಬೇಕು. ಅಕ್ಕಮಹಾದೇವಿ ರಸ್ತೆಗೆ ಬಸ್‌ಗಳು ತಿರುವು  ಪಡೆಯವುದು ಬೇಡ. ಆದರೆ ಕಾರ್‌, ಆಟೋ, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ, ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಮೇಲೆ ದಂಡ ವಿಧಿಸಿ ಎಂದು ಮನವಿ ಮಾಡಿದರು. 

ಈ ಬಗ್ಗೆ ಮಾತನಾಡಿದ ನರಸಿಂಹ ಅವರು ನಗರದಲ್ಲಿ ಕಳೆದ ತಿಂಗಳು ರಸ್ತೆ ಅಪಘಾತದಲ್ಲಿ ಮೂರು ಜನರು ಸಾವಿಗೀಡಾಗಿದ್ದಾರೆ. ಜನರು ರಸ್ತೆ ನಿಯಮ ಪಾಲನೆ ಮಾಡುತ್ತಿಲ್ಲ. ಒಮ್ಮುಖ ರಸ್ತೆಯಲ್ಲಿ ಬರುವುದು ಹೆಚ್ಚಾಗಿದೆ. ಮೊಬೈಲ್‌  ಫೋನ್ ಬಳಕೆಯೂ ಸಹ ಹೆಚ್ಚಾಗಿದೆ.  ಅಪಘಾತಗಳನ್ನು ತಡೆಗಟ್ಟಲು ಇಲಾಖೆ ವತಿಯಿಂದ ಸೂಕ್ತ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು. 

ಬ್ಯಾರಿಕೇಡ್‌ ತೆರವಿಗೆ ಸಂಬಂಧಪಟ್ಟಂತೆ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. 

ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್‌, ಎಸ್‌. ಮಂಜುನಾಥ್‌, ಇಂದೂಧರ್‌ ನಿಶಾನಿಮಠ್‌, ಶಶಿ ಜೆ.ಎಸ್, ವಸಂತ, ಖಲಂದರ್‌ ಕೆ, ಜೆ.ಎಂ. ಶಾಂತಕುಮಾರ್‌, ಚಂದ್ರಹಾಸ್‌, ನಯಾಜ್‌ ಬೇಗ್‌, ಲಿಯಾಖತ್‌ ಆಲಿ, ಆನಂದ್‌ ಹೋಟೆಲ್‌, ಜಬಿ, ವಿಶ್ವನಾಥ್‌ ಈ ಸಂದರ್ಭದಲ್ಲಿ ಇದ್ದರು. 

error: Content is protected !!