ಮಾನ್ಯರೇ,
ಪಂಚಮಸಾಲಿ ಲಿಂಗಾಯತರು ಎಂದರೆ ಯಾರು? ಎಂದು ನಮ್ಮ 99% ಪಂಚಮಸಾಲಿಗಳಿಗೇ ತಿಳಿದಿಲ್ಲ. ಈ ವಿಚಾರವನ್ನ ನಮ್ಮ ಎರಡೂ ಪಂಚಮಸಾಲಿ ಪೀಠಗಳು ಸ್ಪಷ್ಟವಾಗಿ ನಮಗೆ ತಿಳಿಸಿಲ್ಲ ಎಂದುಕೊಂಡಿದ್ದೇನೆ. ನನಗೆ ತಿಳಿದದ್ದು ಈ ಹಿಂದೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಯತ್ನಾಳ್ ಮತ್ತು ಸಿದ್ದರಾಮಯ್ಯ ನಡುವಿನ ಪಂಚಮಸಾಲಿ ಮೀಸಲಾತಿ ಕುರಿತ ಚರ್ಚೆಯಲ್ಲಿ.
ಅದು ಏನೆಂದರೆ ಪಂಚಮಸಾಲಿ ಎಂದರೆ ಪಂಚಮ ಅಂದರೆ ಹಿಂದೂ ವೈದಿಕದ ಚಾತುರ್ವರ್ಣದ (ನಾಲ್ಕು ವರ್ಣ ಅಥವಾ ಸ್ತರಕ್ಕಿಂತ ಕೀಳಾದ ಪಂಚಮ ಅಂದರೆ ಐದನೇ ಸ್ತರ) ವ್ಯವಸ್ಥೆಯಲ್ಲಿ ಶೂದ್ರರಿಗಿಂತ ಕೀಳುಸ್ತರದಲ್ಲಿಟ್ಟಿದ್ದ ಸಮುದಾಯ. ಇವರನ್ನು ಪರಿವರ್ತನೆ ಮಾಡಿ ಲಿಂಗಾಯತರನ್ನಾಗಿಸಿ ಉತ್ತಮ ಸಂಸ್ಕಾರವಂತರನ್ನಾಗಿಸಿದ್ದು ಬಸವಾದಿ ಶರಣರು ಕೊಟ್ಟ ಇಷ್ಟ ಲಿಂಗ ದೀಕ್ಷೆಯಿಂದ ಎಂದುಕೊಂಡಿದ್ದೇನೆ. ಇದನ್ನು ನಮ್ಮ ಸ್ವಾಮೀಜಿಗಳೇ ಸ್ಪಷ್ಟಪಡಿಸಿ ಕಾಲ್ಪನಿಕ ಮೂರ್ತಿ ಪೂಜೆಯ ಮೌಢ್ಯದ ಆಚರಣೆಗಳ ಕಡೆ ಸಾಗುತ್ತಿರುವುದರ ವಿರುದ್ಧ ಜಾಗೃತಿ ಮೂಡಿಸಲು ಕೋರಿಕೆ.
– ಕೊಟ್ರೇಶ್ ಪಿ. ಐರಣಿ, ಮೊ. 9141305832