ದಾವಣಗೆರೆ, ಮಾ. 13- ನಗರದ ಧ.ರಾ.ಮ. ವಿಜ್ಞಾನ ಕಾಲೇಜಿನ ಎಸ್.ಎಸ್. ಸೆಮಿನಾರ್ ಹಾಲ್‌ನಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಬಾಪೂಜಿ ವಿದ್ಯಾಸಂಸ್ಥೆಯ ಅಂತರ ಕಾಲೇಜು ಸ್ಪರ್ಧೆ `ಪಾರ್ವತಿ – ಕಲೋತ್ಸವ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇಂದು ನಡೆದ ರಂಗೋಲಿ ಸ್ಪರ್ಧೆಗೆ ಬಾಪೂಜಿ ವಿದ್ಯಾಸಂಸ್ಥೆಯ ವಿವಿಧ ಕಾಲೇಜುಗಳ 39 ತಂಡಗಳು, ಅಗ್ನಿ ಇಲ್ಲದ ಅಡುಗೆ ಸ್ಪರ್ಧೆಯಲ್ಲಿ 36 ತಂಡಗಳು ಭಾಗವಹಿಸಿದ್ದವು.
ಧ.ರಾ.ಮ.ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಪ್ರೊ. ಶಕುಂತಲಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾಲೇಜು ನಡೆದು ಬಂದ ದಾರಿ, ಮಹಿಳೆಯರು ಸಾಧಕರಾಗಿ ಹೊರ ಹೊಮ್ಮಲು ಬಾಪೂಜಿ ವಿದ್ಯಾಸಂಸ್ಥೆ ಕಾರಣವಾಯಿತು ಎಂದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಉಪಯುಕ್ತ ಯೋಜನೆಗಳು ಹಳೆಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿ, ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲು ಒಂದು ವೇದಿಕೆ ಕಲ್ಪಿಸಿ ಕೊಟ್ಟಿದ್ದು, ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಎಂ.ಪಿ.ರೂಪಶ್ರೀ ಮಾತನಾಡಿ, ಮಹಿಳೆ ಸಹನಾ ಶೀಲೆ, ಶಕ್ತಿ, ದೃಢತೆಯುಳ್ಳವಳು. ಅವಳು ಮನಸ್ಸು ಮಾಡಿದರೆ ಏನೆಲ್ಲಾ ಸಾಧನೆ ಮಾಡ ಬಲ್ಲಳು ಎಂದರು.
ಪ್ರಾಚಾರ್ಯರಾದ ವನಿತಾ, ಡಾ.ವಿನುತಾ, ಡಾ.ಶುಕ್ಲ ಶೆಟ್ಟಿ, ಡಾ.ಶಶಿಕಲಾ ಕೃಷ್ಣಮೂರ್ತಿ, ಕಮಲಾ ಸೊಪ್ಪಿನ್, ಜಿ.ಸಿ.ನೀಲಾಂಬಿಕೆ ಮತ್ತಿತರರು ಭಾಗವಹಿಸಿದ್ದರು.
ಇದೇ ವೇಳೆ ಕಾಲೇಜಿನ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಕಂಪೂಟರ್ ಸೈನ್ಸ್ ಲ್ಯಾಬ್ ಉದ್ಘಾಟಿಸಿದ್ದ ದಿವಂಗತರಾದ ಆರ್.ಎಲ್. ರಮಾನಂದ್, ಕಾಸಲ್ ವಿಠಲ್, ಎ.ಸಿ.ಜಯಣ್ಣ ಅವರೆಲ್ಲರ ಭಾವಚಿತ್ರಗಳನ್ನು ಅನಾವರಣಗೊಳಿಸಲಾಯಿತು.
ಡಾ.ಬಿ.ಸಿ. ಚೇತನಾ ಸ್ವಾಗತಿಸಿದರು. ಡಾ.ಹೆಚ್.ಬಿ.ವಿ. ಸೌಮ್ಯ ನಿರೂಪಿಸಿದರು. ಶ್ವೇತಾ ಶಕುಂತಲಾ ಅವರ ಪರಿಚಯ ಮಾಡಿಕೊಟ್ಟರು. ಶಾಯಿಸಾ ವಂದಿಸಿದರು.
ಮಮತಾ ಮಧು, ಕೆ.ಆರ್. ವಸಂತ ರಂಗೋಲಿ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಡಾ.ಅನುರಾಧ ಬಕ್ಕಪ್ಪ, ನಿರ್ಮಲಾ ವಾಲಿ ಅವರು ಅಗ್ನಿ ಇಲ್ಲದ ಅಡುಗೆ ಸ್ಪರ್ಧೆಗೆ ತೀರ್ಪುಗಾರರಾಗಿದ್ದರು.
ಇದೇ ದಿನಾಂಕ 23 ರಂದು ಬಿಐಇಟಿ ಕಾಲೇಜಿನ ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು.