ಉಕ್ಕಡಗಾತ್ರಿ : ಅಜ್ಜಯ್ಯನ ಜಾತ್ರೆಗೆ ಚಾಲನೆ

ಉಕ್ಕಡಗಾತ್ರಿ : ಅಜ್ಜಯ್ಯನ ಜಾತ್ರೆಗೆ ಚಾಲನೆ

ಉಕ್ಕಡಗಾತ್ರಿ : ಅಜ್ಜಯ್ಯನ ಜಾತ್ರೆಗೆ ಚಾಲನೆ - Janathavaniಮಲೇಬೆನ್ನೂರು, ಫೆ, 28 – ಸುಕ್ಷೇತ್ರ ಉಕ್ಕ ಡಗಾತ್ರಿಯಲ್ಲಿ ಒಂದು ವಾರ ಕಾಲ ನಡೆಯುವ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಮಹಾಶಿವರಾತ್ರಿ ಜಾತ್ರಾ ಮಹೋ ತ್ಸವಕ್ಕೆ ನಂದಿಗುಡಿ ವೃಷಭಪುರಿ ಮಹಾಸಂಸ್ಥಾನ ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಇಂದು ಬೆಳಿಗ್ಗೆ ನಂದಿ ಧ್ವಜಾರೋ ಹಣ ಮಾಡುವ ಮೂಲಕ ಚಾಲನೆ ನೀಡಿದರು.

ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಪ್ರಯಾಗ್ ರಾಜ್ ನಲ್ಲಿ ಜರುಗಿದ ಮಹಾ ಕುಂಭಮೇಳವು ವಿಶ್ವದ ಪ್ರಮುಖ ಆಧ್ಯಾತ್ಮಿಕ ಕೂಟಗಳಲ್ಲಿ ಮೊದಲ ಸ್ಥಾನ ಪಡೆದಿದ್ದು ಕೋಟ್ಯಾಂತರ ಭಕ್ತರನ್ನು ಆಚರಣೆ ಮತ್ತು ಭಕ್ತಿಯಿಂದ ಒಟ್ಟುಗೂಡಿಸಿದೆ. ವಿಶಿಷ್ಟವಾದ ಈ ಮಹಾ ಕುಂಭಮೇಳ ನಮ್ಮಗಳ ಭಾಗ್ಯದ ಜೀವಿತಾವಧಿಯಾಗಿದೆ. ಅಂತಹ ಸಾಲಿನಲ್ಲೇ ಪವಾಡ ಪುರುಷ ಕರಿಬಸವೇಶ್ವರ ಅಜ್ಜಯ್ಯ ಭಕ್ತರನ್ನು ಪೊರೆಯುವ ಆರಾಧ್ಯ ದೈವ ಎಂದು ಹೇಳಿದರು.

ಗದ್ದುಗೆ ಟ್ರಸ್ಟ್ ಕಮಿಟಿಯ ಕಾರ್ಯದರ್ಶಿ ಎಸ್. ಸುರೇಶ್ ಮಾತನಾಡಿ, ಅಜ್ಜಯ್ಯನ ದರ್ಶ ನಕ್ಕೆ ಬರುವ ಭಕ್ತರಿಗೆ ಎಲ್ಲಾ ತರಹದ ವ್ಯವಸ್ಥೆ ಗಳನ್ನು ಮಾಡಲಾಗಿದೆ ಎಂದು ತಿಳಿಸಿದರು. 

ಗದ್ದುಗೆ ಟ್ರಸ್ಟ್ ಕಮಿಟಿಯ ಟ್ರಸ್ಟಿಗಳಾದ ಜಿಗಳಿ ಇಂದೂಧರ್ ಮಾತನಾಡಿ, ಸುಕ್ಷೇತ್ರ ಉಕ್ಕಡಗಾತ್ರಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾ ಗುತ್ತಲೇ ಇದ್ದು ಭಕ್ತರ ಅನುಕೂಲಕ್ಕಾಗಿ ವಸತಿ ಮತ್ತು ದಾಸೋಹ ವ್ಯವಸ್ಥೆಯನ್ನು ಭಕ್ತರ ನೆರವಿ ನಲ್ಲಿಯೇ ಮಾಡುತ್ತಿದ್ದೇವೆ ಎಂದು ತಿಳಿಸಿದರು. 

ಜಾತ್ರೆ ಅಂಗವಾಗಿ ಮಾರ್ಚ್ 4 ರಂದು ದಾವಣಗೆರೆಯ ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಬೃಹತ್ ಆರೋಗ್ಯ ಮೇಳವನ್ನು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಉದ್ಘಾಟಿಸಲಿದ್ದಾರೆ.  

ಟ್ರಸ್ಟಿ ವಿವೇಕಾನಂದ ಪಾಟೀಲ್, ಶಿಕ್ಷಕ ಮಹಾಂತಯ್ಯ ಚೊಗಚಿಕೊಪ್ಪ ಮಾತನಾಡಿದರು.

ಟ್ರಸ್ಟ್ ಕಮಿಟಿಯ ಪ್ರಕಾಶ್ ಕೋಟೇರ್, ಗದಿಗೆಪ್ಪ ಹೊಸಳ್ಳಿ, ಗದಿಗಯ್ಯ ಪಾಟೀಲ್, ನಾಗರಾಜ್ ದಿಲ್ಲಿವಾಲ, ಬಸವನಗೌಡ ಪಾಳೇದ, ವೀರನಗೌಡ ಹಲಗಪ್ಪನವರ ಮತ್ತು ವಿದ್ಯಾಸಂಸ್ಥೆಯ ಪದಾಧಿಕಾರಿಗಳಾದ ಜಿಗಳೇರ ಗದಿಗೇಶ್, ವೀರಭದ್ರಪ್ಪ ಕೋಟೇರ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಾಳೆ ಶನಿವಾರ ಬೆಳಿಗ್ಗೆ 8 ಗಂಟೆಗೆ ಶ್ರೀ ಕರಿಬಸವೇಶ್ವರ ಸ್ವಾಮಿಗೆ ಅಭಿಷೇಕ ಮತ್ತು ಮಹಾಪೂಜೆ ನಡೆದ ನಂತರ ನಂದಿಗುಡಿ ಮಠದ ಸಿದ್ದರಾಮೇಶ್ವರ ಶಿವಾಚಾರ್ಯ ಶ್ರೀಗಳು ಮಹಾ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

error: Content is protected !!