ದಾವಣಗೆರೆ, ಫೆ. 23- ಪೊಲೀಸರು ಅರ್ಧ ಹೆಲ್ಮೆಟ್ ಕಾರ್ಯಾಚರಣೆಯನ್ನು ಭಾನುವಾರವೂ ಮುಂದುವರೆಸಿದ್ದಾರೆ. ನಗರ ಸಂಚಾರ ಪೊಲೀಸ್ ಸಿಪಿಐ ನಲವಾಗಲು ಮಂಜುನಾಥ್ ರವರ ನೇತೃತ್ವದಲ್ಲಿ ದಕ್ಷಿಣ ಹಾಗೂ ಉತ್ತರ ಸಂಚಾರ ಪಿಎಸ್ಐಗಳಾದ ಜಯಶೀಲ, ನಿರ್ಮಲ, ಶೈಲಜಾ ಹಾಗೂ ಮಂಜಪ್ಪ ಹಾಗೂ ಸಿಬ್ಬಂದಿಗಳ ತಂಡವು ಅರ್ಧ ಹೆಲ್ಮೆಟ್ ಹಾಕಿಕೊಂಡು ಸಂಚರಿಸುತ್ತಿದ್ದ ಸವಾರರಿಂದ ಅವುಗಳನ್ನು ವಶಪಡಿಸಿಕೊಂಡು ಗುಣಮಟ್ಟದ ಹೆಲ್ಮೆಟ್ ಬಳಸುವಂತೆ ಅರಿವು ಮೂಡಿಸಿದರು.
ನಗರದ ಬಾಡಾ ಕ್ರಾಸ್, ಡೆಂಟಲ್ ಕಾಲೇಜ್ ರೋಡ್, ಅಂಬೇಡ್ಕರ್ ಸರ್ಕಲ್ ಮತ್ತು ಐಟಿಐ ವೃತ್ತದ ಬಳಿ ಕಾರ್ಯಚರಣೆ ನಡೆಸಿ 1200 ಪ್ಲಾಸ್ಟಿಕ್ ಅಥವಾ ಅರ್ಧ ಹೆಲ್ಮೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.