ಎಪಿಎಂಸಿಯಲ್ಲಿನ ಚೌಕಿಪೇಟೆ ವ್ಯಾಪಾರಿಗಳ ಮಳಿಗೆ ಮುಟ್ಟುಗೋಲು : ಜಿಲ್ಲಾಧಿಕಾರಿ

ಎಪಿಎಂಸಿಯಲ್ಲಿನ ಚೌಕಿಪೇಟೆ ವ್ಯಾಪಾರಿಗಳ ಮಳಿಗೆ ಮುಟ್ಟುಗೋಲು : ಜಿಲ್ಲಾಧಿಕಾರಿ

ಹಳೆಭಾಗಕ್ಕೆ ಆಟೋ ಸಂಚಾರ ನಿಷೇಧ: ಡಿಸಿ

ನಗರದ ಹಳೆ ಭಾಗದಲ್ಲಿ ಸಂಚಾರ ವ್ಯವಸ್ಥೆಗೆ ತೀವ್ರ ಸವಾಲಾಗಿರುವ ಆಟೋಗಳಿಗೆ ಆ ಭಾಗಕ್ಕೆ ಹೋಗದಂತೆ ಶೀಘ್ರವೇ ಕ್ರಮ ಕೈಗೊಳ್ಳಲಾವುದು ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಹೇಳಿದರು.

ಮುಂಜಾನೆ 6 ಗಂಟೆಯ ವೇಳೆಗೆ ಹಳೆ ದಾವಣಗೆರೆಗೆ ಹೋಗುವುದು ಕಷ್ಟವಾಗಿದೆ. ಸ್ವತಃ ನಾನೇ ಈ ಸಮಸ್ಯೆಯನ್ನು ಅನುಭವಿಸಿದ್ದೇನೆ. ಆಟೋ ಚಾಲಕರು ತಮ್ಮ ವರ್ತನೆಯನ್ನು ತಿದ್ದಿಕೊಳ್ಳುವ ವಿಶ್ವಾಸ ಇತ್ತು. ಆದರೆ ನನ್ನ ನಿರೀಕ್ಷೆ ಹುಸಿ ಯಾಗಿದೆ. ಹಾಗಾಗಿ ಶೀಘ್ರವೇ ದಾವಣ ಗೆರೆಯ ಹಳೆಭಾಗದಲ್ಲಿ ಆಟೋ ಸಂಚಾರ ನಿಷೇಧಿಲಾಗುವುದು ಎಂದು ಹೇಳಿದರು.

ದಾವಣಗೆರೆ, ಫೆ. 21-  ನಗರದ ಚೌಕಿಪೇಟೆಯ ವ್ಯಾಪಾರಸ್ಥರಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ನೀಡಿರುವ ಮಳಿಗೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗು ವುದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹೇಳಿದ್ದಾರೆ.

ಶುಕ್ರವಾರ ಎಸ್ಪಿ ಕಚೇರಿಯಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಹಳೆ ದಾವಣಗೆರೆ ಭಾಗದಲ್ಲಿ ವಾಹನ ದಟ್ಟಣೆಯಿಂದ ಸಾಕಷ್ಟು ಸಮಸ್ಯೆಗಳು ಉದ್ಭವಿಸುತ್ತಿವೆ. ಲೋಡಿಂಗ್ ಅನ್‌ಲೋಡಿಂಗ್ ನಿಂದಾಗಿ ಸಮಸ್ಯೆ ಸಾಕಷ್ಟು ಬಿಗಡಾಯಿಸಿದೆ ಎಂದರು.

ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ವ್ಯಾಪರಸ್ಥರಿಗೆ ಮಳಿಗೆ ನೀಡಲಾಗಿತ್ತು. ಆದರೆ ಅವುಗಳನ್ನು ಬಳಕೆ ಮಾಡಿಕೊಳ್ಳದೇ ಆನ್‌ಲೋಡಿಂಗಿಗೆ ಲಾರಿಯನ್ನು ನೇರವಾಗಿ ಚೌಕಿಪೇಟೆಗೆ ತರುತ್ತಿದ್ದಾರೆ. ಪರಿಣಾಮ ವ್ಯವಸ್ಥೆ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ 15 ದಿನಗಳಲ್ಲಿ ನೀಡಿರುವ ಎಲ್ಲ ಮಳಿಗೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಹೇಳಿದರು.

ಲಾರಿ ಮಾಲೀಕರ ಸಂಘದ ಬಹುದಿನಗಳ ಬೇಡಿಕೆಯಾಗಿದ್ದ ಟ್ರಕ್‌ ಟರ್ಮಿನಲ್ ನಿರ್ಮಾಣಕ್ಕೆ ಬಾಡಾ ತಿರುವಿನಲ್ಲಿ 5 ಎಕರೆ ಸರ್ಕಾರಿ ಜಾಗ ಅಂತಿಮಗೊಳಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ, ಈ ಜಾಗವನ್ನು ಅಂತಿಮಗೊಳಿಸಿ ಟ್ರಕ್‌ ಟರ್ಮಿನಲ್‌ಗೆ ಈ ಜಾಗ ನೀಡಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನ ಲಾರಿ ಮಾಲಿಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಅವರು ಸಂಚಾರಿ ಸಮಸ್ಯೆ ಹಾಗೂ ಟ್ರಕ್ ಟರ್ಮಿನಲ್ ಕುರಿತು ಪ್ರಸ್ತಾಪಿಸಿದರು.

ಸಭೆಯಲ್ಲಿ ಹೆಚ್ಚುವರಿ ಎಸ್ಪಿ ವಿಜಯ್ ಕುಮಾರ್ ಸಂತೋಷ್, ಮಂಜುನಾಥ್ ಇತರರು ಉಪಸ್ಥಿತರಿದ್ದರು.

error: Content is protected !!