ಎಂಸಿಸಿ `ಬಿ’ ಬ್ಲಾಕ್‌ನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಎಂಸಿಸಿ `ಬಿ’ ಬ್ಲಾಕ್‌ನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

`ಮನೆ ಬಾಗಿಲಿಗೆ ನಿಮ್ಮ ಸೇವಕ’ ಅಭಿಯಾನ ಶ್ಲ್ಯಾಘನೀಯ

– ಕೆ. ಚಮನ್ ಸಾಬ್, ಮೇಯರ್

ದಾವಣಗೆರೆ, ಫೆ. 18 – ಬೆಂಗಳೂರು ಸೇರಿದಂತೆ ದೊಡ್ಡ, ದೊಡ್ಡ ಮಹಾನಗರಗಳ ಹೃದಯ ಭಾಗದಲ್ಲಿನ ಪ್ರದೇಶದ ಅಭಿವೃದ್ಧಿಯಂತೆ ದಾವಣಗೆರೆ ಮಹಾನಗರ ಪಾಲಿಕೆಯ 38ನೇ ವಾರ್ಡ್‌ ಎಂಸಿಸಿ `ಬಿ’ ಬ್ಲಾಕ್ ಅಭಿವೃದ್ಧಿಪಡಿಸ ಲಾಗಿದೆ. ಇದೊಂದು ಅತ್ಯುತ್ತಮ ಕಾರ್ಯ ಎಂದು ಮಹಾನಗರ ಪಾಲಿಕೆ ಮೇಯರ್ ಕೆ. ಚಮನ್ ಸಾಬ್ ಬಣ್ಣಿಸಿದರು.

ಎಂಸಿಸಿ `ಬಿ’ ಬ್ಲಾಕ್‌ನಲ್ಲಿ ಇಂದು ಬೆಳಿಗ್ಗೆ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಈ ವಾರ್ಡ್‌ನಲ್ಲಿ ಆದಷ್ಟು ಅಭಿವೃದ್ದಿ ಕಾರ್ಯಗಳು ಬೇರೆ ಕಡೆ ಆಗಿಲ್ಲ ಎಂದೆನಿಸುತ್ತದೆ ಎಂದು ಹೇಳಿದರು.

ಈ ವಾರ್ಡ್ ಪಾಲಿಕೆ ಸದಸ್ಯ ಜಿ.ಎಸ್. ಮಂಜುನಾಥ್ ಗಡಿಗುಡಾಳ್ ಅವರು ಶಕ್ತಿಮೀರಿ ಅನುದಾನ ತಂದು ವಿವಿಧ ಅಭಿವೃದ್ಧಿ ಕಾಮಗಾರಿ ಗಳನ್ನು ನಡೆಸಿದ್ದಾರೆ. ಮನೆ ಬಾಗಿಲಿಗೆ ನಿಮ್ಮ ಸೇವಕ ಅಭಿಯಾನ ನಡೆಸಿರುವುದು ಶ್ಲ್ಯಾಘನೀಯ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ ಎಂದು ಚಮನ್ ಸಾಬ್ ಹೇಳಿದರು.

ಪಾಲಿಕೆ ಸದಸ್ಯ ಜಿ. ಎಸ್. ಮಂಜುನಾಥ್ ಗಡಿ ಗುಡಾಳ್ ಮಾತನಾಡಿ, ವಾರ್ಡ್‌ನಲ್ಲಿ ಇಷ್ಟೊಂದು ಅಭಿವೃದ್ಧಿ ಕಾರ್ಯ ನಡೆಸಲು ಸಾಧ್ಯವಾಗಿದ್ದು ಜನರು ತೋರಿಸಿದ ಪ್ರೀತಿ, ಕೊಟ್ಟ ಧೈರ್ಯವೇ ಕಾರಣ. ಏನೇ ಸಮಸ್ಯೆಗಳಿದ್ದರೂ ಹೇಳುವ ಜನರು ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿದ್ದಾರೆ. ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ,  ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಾಕಷ್ಟು ಅನುದಾನ ನೀಡಿದ್ದಾರೆ. ಈ ಅನುದಾನ ದಲ್ಲಿಯೇ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನದಲ್ಲಿ ನಮ್ಮ ವಾರ್ಡ್ ಇದೆ ಎಂಬುದೇ ಖುಷಿಯ ವಿಚಾರ.  ಜನರೂ ಸಹ ಅಷ್ಟೇ ಕಾಳಜಿ ವಹಿಸಿ, ವಾರ್ಡ್ ಸ್ವಚ್ಛವಾಗಿಟ್ಟುಕೊಂಡಿದ್ದಾರೆ. ಒಣ ಕಸ, ಹಸಿ ಕಸ ಬೇರ್ಪಡಿಸಿ ನೀಡುವ ಮೂಲಕ ಸಹಕಾರ ನೀಡಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಜನರ ಬಲದಿಂದಾಗಿಯೇ ಇಷ್ಟೊಂದು ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು. 

ನಗರ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸವಿತಾ ಗಣೇಶ್ ಹುಲ್ಲುಮನೆ, ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಆಶಾ ಉಮೇಶ್, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ಮಂಜುನಾಥ ಇಟ್ಟಿಗುಡಿ, ನಾಮನಿರ್ದೇಶಿತ ಸದಸ್ಯ ಸುರಭಿ ಶಿವಮೂರ್ತಿ, ತೆರಿಗೆ ಹಾಗೂ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಉರ್ ಬಾನು ಪಂಡಿತ್, ಅಂದನೂರು ಮುಪ್ಪಣ್ಣ, ಬಿ.ಹೆಚ್. ಪರಶುರಾಮಪ್ಪ, ಜಾವೀದ್ ಸಾಬ್, ಜಬ್ಬರ್ ಸಾಬ್, ಕುಶಾಲ್ ಶೆಟ್ರು, ಕಬ್ಬೂರು ಪ್ರಕಾಶ್, ಬೆಳ್ಳೂಡಿ ವೀರಣ್ಣ, ಮೇಕಾ ಸತ್ಯನಾರಾಯಣ್, ಪ್ರಕಾಶ್, ನಿಂಗನಗೌಡ, ವೀರೇಶ್ ಪಾಟೀಲ್, ರುದ್ರೇಶ್, ದೊಗ್ಗಳ್ಳಿ ಶಿವಕುಮಾರ್, ಹೇಮಂತ್ ಆರಾಧ್ಯ, ರವಿಯಣ್ಣ, ಗುರುಮೂರ್ತಿ, ಮುರುಗೇಶ್ ಮಂತ್ರಿ, ಶೌಕತ್ ಆಲಿ, ವಿಶ್ವನಾಥ್ ಬುಳ್ಳಾಪುರ, ಶ್ರೀಕಾಂತ್, ಮಂಜುನಾಥ್ ಮತ್ತು ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

error: Content is protected !!