ಹಳೇ ಕುಂದುವಾಡದಲ್ಲಿ ಇಂದು ದೇವಸ್ಥಾನ ಉದ್ಘಾಟನೆ, ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ

ಹಳೇ ಕುಂದುವಾಡದಲ್ಲಿ ಇಂದು ದೇವಸ್ಥಾನ ಉದ್ಘಾಟನೆ, ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ

ದಾವಣಗೆರೆ, ಫೆ.16- ತಾಲ್ಲೂಕಿನ ಹಳೇಕುಂದುವಾಡ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಮತ್ತು ಶ್ರೀ ಬಸವೇಶ್ವರ ದೇವಸ್ಥಾನದ ಉದ್ಘಾಟನೆ, ಶಿಲಾಮೂರ್ತಿ ಪ್ರತಿಷ್ಠಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಫೆಬ್ರವರಿ 13ರಿಂದ 17ರವರೆಗೆ 5 ದಿನಗಳ ಕಾಲ ನಡೆಯಲಿದೆ  ಎಂದು ಶ್ರೀ ಆಂಜನೇಯ ಸ್ವಾಮಿ, ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಹೆಚ್.ಜಿ.ಗಣೇಶಪ್ಪ ಅವರು  ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

 ನಾಳೆ ದಿನಾಂಕ 17ರ ಸೋಮವಾರ ಬೆಳಿಗ್ಗೆ 11ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಸಾನ್ನಿಧ್ಯವನ್ನು ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ಕಾಗಿನೆಲೆ ಮಹಾಸಂಸ್ಥಾನ ಶ್ರೀ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗಳು, ಹೊಸದುರ್ಗದ ಶ್ರೀ ಕನಕ ಗುರುಪೀಠ ಶಾಖಾ ಮಠದ ಈಶ್ವರಾನಂದಪುರಿ, ದಾವಣಗೆರೆಯ ಶ್ರೀ ಮುರುಘ ರಾಜೇಂದ್ರ ಮಠದ ಬಸವಪ್ರಭು ಶ್ರೀಗಳು, ಹದಡಿಯ ಚಂದ್ರಗಿರಿ ಮಠದ ಪರಮಹಂಸ ಶ್ರೀ ಮುರಳೀಧರ ಶ್ರೀಗಳು, ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳು, ರಾಜನಹಳ್ಳಿಯ ವಾಲ್ಮೀಕಿ ಗುರುಪೀಠ ಮಹಾಸಂಸ್ಥಾನದ ಪ್ರಸನ್ನಾನಂದಪುರಿ ಶ್ರೀಗಳು, ಶ್ರೀ ಕ್ಷೇತ್ರ ಅವರಗೊಳ್ಳದ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಶ್ರೀಗಳು, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಶ್ರೀಗಳು, ಚಿತ್ರದುರ್ಗದ ಮಾಚಿದೇವ ಮಹಾಸಂಸ್ಥಾನ ಮಠದ ಬಸವ ಮಾಚಿದೇವ ಶ್ರೀಗಳು, ಹೊಸದುರ್ಗ ಭಗೀರಥ ಪೀಠದ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನದ ಪುರುಷೋತ್ತಮಾನಂದಪುರಿ ಶ್ರೀಗಳು, ಚಿತ್ರದುರ್ಗದ ಛಲವಾದಿ ಗುರುಪೀಠದ ಬಸವ ನಾಗಿದೇವ ಶ್ರೀಗಳು, ಹಳೇಕುಂದುವಾಡದ ಕರಿಬಸವೇಶ್ವರ ದೇವಸ್ಥಾನದ ಧರ್ಮಾಧಿಕಾರಿ ರಾಜಣ್ಣ ವಹಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಎಸ್.ಎಸ್.ಮಲ್ಲಿಕಾರ್ಜುನ್, ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಸೇರಿದಂತೆ ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ಮುಖಂಡರು, ದಾನಿಗಳು, ಅಧಿಕಾರಿಗಳು, ಗ್ರಾಮಸ್ಥರು ಸೇರಿದಂತೆ ಅಪಾರ ಭಕ್ತ ಗಣ ಆಗಮಿಸಲಿದೆ..ಗ್ರಾಮದ ಬಸವ ಆಂಜನೇಯ ಡೊಳ್ಳು ಸಂಘ ಡೊಳ್ಳಿನ ಸದ್ದು ಮಾಡಲು ಸಿದ್ದವಾಗಿದೆ, ಜೊತೆಗೆ 18ರಂದು ಹಳೇ ಕುಂದುವಾಡ ಗ್ರಾಮದಲ್ಲಿ `ಸಾವು ತಂದ ಸೌಭಾಗ್ಯ’ ನಾಟಕ ಪ್ರದರ್ಶನವಾಗಲಿದೆ ಎಂದರು.

ಸಮಾರಂಭದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ 41 ದಿ‌ನಗಳ ಕಾಲ ಮದ್ಯ, ಮಾಂಸ ಮಾರಾಟ, ಸೇವನೆ ಸಂಪೂರ್ಣವಾಗಿ ನಿಷೇಧ ಮಾಡಲಾಗಿದ್ದು ಕಟ್ಟು  ನಿಟ್ಟಿನ ಪಾಲನೆ ಮಾಡಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಹೆಚ್ ಎನ್ ಗುರುನಾಥ್,  ಹಿರಿಯ ಮುಖಂಡರಾದ ಹೆಚ್.ಜಿ ದೊಡ್ಡೆಪ್ಪ, ಗೌಡ್ರು ಬಸವರಾಜಪ್ಪ, ಸಿದ್ದನಗೌಡ್ರು, ಚನ್ನಬಸಪ್ಪ ಗೌಡ್ರು, ಹೆಚ್.ಬಿ.ಅಣ್ಣಪ್ಪ, ಜೆ ಮಾರುತಿ, ಬಾರಿಕರ ಚಂದ್ರಪ್ಪ, ನರಸಪ್ಪರ ಶಿವಪ್ಪ, ಮಿಟ್ಟಕಟ್ಟೆ ಚಂದ್ರಪ್ಪ, ಬೆಳ್ಳೂಡಿ ಬಸಣ್ಣ,,ಯು ವಿ ಶ್ರೀನಿವಾಸ್, ಡಿಎಸ್ ಎಸ್ ಮಂಜುನಾಥ್, ಹೆಚ್.ಎಸ್.ಶ್ರೀನಿವಾಸ್,  ತಡಿಕೆಪ್ಪರ್ ನಿಂಗಪ್ಪ, ಹೆಚ್ ಎಸ್ ಉಮಾಪತಿ, ದಯಾನಂದ್, ಜೆಸಿ ದೇವರಾಜ್, ಎನ್ ಟಿ ನಾಗರಾಜ್, ಜಿ.ಹೆಚ್.ಗಣೇಶ್, ಎಸ್.ಬಿ.ವಿಜಯ್, ದೇವಸ್ಥಾನ ಸಮಿತಿ ಸದಸ್ಯರು, ಡೊಳ್ಳಿನ ಸಂಘದ ಸದಸ್ಯರು ಸೇರಿದಂತೆ ಇತರರಿದ್ದರು.

error: Content is protected !!