ಹರಿಹರದಲ್ಲಿ ಶೀಘ್ರ 93.6 ಲಕ್ಷ ವೆಚ್ಚದಲ್ಲಿ ಉದ್ಯಾನವನ 3.82 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ

ಹರಿಹರದಲ್ಲಿ ಶೀಘ್ರ 93.6 ಲಕ್ಷ ವೆಚ್ಚದಲ್ಲಿ ಉದ್ಯಾನವನ  3.82 ಕೋಟಿ ರೂ. ವೆಚ್ಚದಲ್ಲಿ ರಸ್ತೆ  ನಿರ್ಮಾಣ ಕಾಮಗಾರಿ

ಜನಸಂಪರ್ಕ ಸಭೆಯಲ್ಲಿ ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ

ಹರಿಹರ, ಫೆ.14-      ನಗರದಲ್ಲಿ 93.6 ಲಕ್ಷ ರೂ. ವೆಚ್ಚದಲ್ಲಿ ಪಾರ್ಕ್ ಮತ್ತು 3 ಕೋಟಿ 82 ಲಕ್ಷ ರೂ.  ವೆಚ್ಚದಲ್ಲಿ ಗುತ್ತೂರುನಿಂದ ಅಮರಾವತಿ ಕ್ರಾಸ್‌ವರೆಗೆ ರಸ್ತೆ ಕಾಮಗಾರಿಗೆ ಅತಿ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು.

ನಗರಸಭೆ ಆವರಣದಲ್ಲಿ ಇಂದು ನಡೆದ ಜನ ಸಂಪರ್ಕ ಸಭೆಯನ್ನುದ್ದೇಶಿಸಿ  ಮಾತನಾಡಿದ ಅವರು, ಕಳೆದ ತಿಂಗಳು ಇಲ್ಲಿ ಆರಂಭಿಸಲಾದ    ದೂಡಾ ಶಾಖಾ ಕಚೇರಿಯಲ್ಲಿ  ಈವರೆಗೆ  101 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ ಕೆಲವನ್ನು ಇತ್ಯರ್ಥ ಪಡಿಸಲಾಗಿದ್ದು, ಉಳಿದವುಗಳ ಬಗ್ಗೆ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದರು.

ಸರ್ಕಾರದ ನಿಬಂಧನೆಗಳ ಅನ್ವಯ  ಹೊಸದಾಗಿ ಲೇಔಟ್ ನಿರ್ಮಾಣ ಮಾಡಿದಾಗ ಮಾತ್ರ ಮೂ ಲಭೂತ ಸೌಕರ್ಯಗಳನ್ನು ಒದಗಿಸು ವುದಕ್ಕೆ ಅವಕಾಶ ಇರುತ್ತದೆ. ಜೊತೆಗೆ ರಿಂಗ್ ರೋಡ್ ನಿರ್ಮಾಣ ಮಾಡುವು ದರಿಂದ ನಗರಕ್ಕೆ ಬೇರೆ ಬೇರೆ ನಗರದಿಂದ ಬರುವಂತಹ ಸಾರ್ವಜನಿ ಕರಿಗೆ, ವ್ಯಾಪಾರ ವಹಿವಾಟು ನಡೆಸು ವಂತಹವರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲ  ಆಗುತ್ತದೆ. ಆದ್ದರಿಂದ ಹೊಸದಾಗಿ ಲೇಔಟ್ ಮಾಡುವಂತ ವರು ಬಹಳಷ್ಟು ಜಾಗರೂಕತೆ ವಹಿಸಬೇಕು ಎಂದು ಹೇಳಿದರು.

ಪ್ರಾಧಿಕಾರದ ವತಿಯಿಂದ ಜಮೀನನ್ನು ಖರೀದಿಸಿ ಲೇಔಟ್ ಮಾಡಲು  ಇಲಾಖೆ ಸಿದ್ದವಾಗಿದ್ದು, ಯಾರಾದರೂ ಜಮೀನನ್ನು ಕೊಡುವಂ ತವರು ಮುಂದೆ ಬಂದರೆ ನೇರವಾಗಿ ಖರೀದಿಸಲಾಗುತ್ತದೆ. ಇಲ್ಲವಾದರೆ ಶೇ.50 ರಂತೆ ನೀಡಿದರೂ ಸಹ ಅದಕ್ಕೆ ಸಹಮತ ಇರುತ್ತದೆ ಎಂದು ಹೇಳಿದರು.

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಈ ಹಿಂದೆ ಮಾಡಿದ ತಪ್ಪಿನಿಂದಾಗಿ ಬಹಳಷ್ಟು ಲೇಔಟ್‌ಗಳು ಅಭಿವೃದ್ಧಿಗಾಗಿ ಪರದಾಡುವಂತೆ ಆಗಿದೆ. ಆಗ ಲೇಔಟ್ ಪ್ಲಾನ್ ಪಡೆದಿದ್ದರೇ, ಪಾರ್ಕ್ ಅಭಿವೃದ್ಧಿ ಮತ್ತು ಸಿಎ ಸೈಟ್ ಪಡೆಯಲು ಅವಕಾಶ ಇರುತ್ತಿತ್ತು. ಅಂದಿನ ನಗರಸಭೆ ಯವರು ಕಾನೂನು ಬಾಹಿರವಾಗಿ ಕೆಲಸ ಮಾಡಿದ್ದರಿಂದಾಗಿ   ಜನರು ತೊಂದರೆ ಅನುಭವಿಸುವಂತೆ ಆಗಿದೆ ಎಂದರು.

 ದೂಡ ಮಾಜಿ ಸದಸ್ಯ ಹೆಚ್. ನಿಜಗುಣ,  ನಗರಸಭೆ ಸದಸ್ಯ ದಾದಾ ಖಲಂದರ್,  ಕೆ.ಹೆಚ್. ಬಿ. ವೀರಯ್ಯ,  ಕಾಂಗ್ರೆಸ್ ಪಕ್ಷದ ಮುಖಂಡ ನಂದಿಗಾವಿ ಶ್ರೀನಿವಾಸ್,   ರೆಹಮತ್ ಉಲ್ಲಾ, ರೆಹಮಾನ್, ನಗರಸಭೆ ಸದಸ್ಯ ಶಂಕರ್ ಖಟಾವ್ಕರ್,  ಬಿ‌.ರೇವಣಸಿದ್ದಪ್ಪ ಮಾತನಾಡಿ ಅನೇಕ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.

ಈ ಸಂದರ್ಭದಲ್ಲಿ  ಪ್ರಾಧಿಕಾರದ ದೂಡ ಆಯುಕ್ತ ಹುಲ್ಮನಿ ತಿಮ್ಮಣ್ಣ,   ಸದಸ್ಯರಾದ ವಾಣಿ ಬಕ್ಕೇಶ್,  ಹಳ್ಳಳ್ಳಿ ಜಬ್ಬಾರ್ ಸಾಬ್,  ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಗುತ್ತೂರು ಜಂಬಣ್ಣ, ನಗರಸಭೆ ಸದಸ್ಯರಾದ ಹನುಮಂತಪ್ಪ, ಕೆ.ಜಿ. ಸಿದ್ದೇಶ್, ಅಬ್ದುಲ್ ಅಲಿಂ, ರಜನಿಕಾಂತ್, ವಸಂತ್,  ನಗರಸಭೆ ಮಾಜಿ ಅಧ್ಯಕ್ಷ ಕೃಷ್ಣ ಸಾ ಭೂತೆ, ಹಳ್ಳಳ್ಳಿ ಬಸಪ್ಪ, ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ದೂಡಾ ಜಂಟಿ ನಿರ್ದೇಶಕ ಅಣ್ಣಪ್ಪ, ನಗರ ಅಭಿವೃದ್ಧಿ ಆಯೋಜಕ ಪ್ರದೀಪ್, ರವಿಕುಮಾರ್, ಪರಮೇಶ್ವರ ನಾಯ್ಕ್, ರಘುನಾಥ್, ನಗರಸಭೆ ಸಿಬ್ಬಂದಿಗಳಾದ ನಿರಂಜನಿ,  ರಮೇಶ್, ಇತರರು ಹಾಜರಿದ್ದರು.

error: Content is protected !!