ಸೂಪರ್ ಮ್ಯಾಕ್ಸ್ ಸ್ಮಾರ್ಟ್ ವಿದ್ಯುತ್ ಮೀಟರ್ ಉತ್ಪಾದನಾ ಘಟಕ ಉದ್ಘಾಟನೆ

ಸೂಪರ್ ಮ್ಯಾಕ್ಸ್ ಸ್ಮಾರ್ಟ್ ವಿದ್ಯುತ್ ಮೀಟರ್ ಉತ್ಪಾದನಾ ಘಟಕ ಉದ್ಘಾಟನೆ

ದಾವಣಗೆರೆ, ಜ.31- ದೇಶದಲ್ಲೇ ಅತ್ಯಾಧುನಿಕ ತಂತ್ರಜ್ಞಾನದ ಸ್ಮಾರ್ಟ್ ಎನರ್ಜಿ ಮೀಟರ್‌ಗಳ ಉತ್ಪಾದನಾ ಘಟಕ `ಸೂಪರ್ ಮ್ಯಾಕ್ಸ್  ಕಾಂಪೋನೆಂಟ್ಸ್ ಪ್ರೈವೇಟ್ ಲಿಮಿಟೆಡ್’ ಇದರ ಆರಂಭವನ್ನು ಆವರಗೆರೆಯ ಘಟಕದ ಆವರಣದಲ್ಲಿ ನೆರವೇರಿಸಲಾಯಿತು. 

ಉದ್ಘಾಟಕರಾಗಿ ಆಗಮಿಸಬೇಕಿದ್ದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ವಯೋ ಸಹಜ ಕಾರಣಗಳಿಂದ ಸ್ವಗೃಹದಿಂದಲೇ ಶುಭ ಹಾರೈಸಿದರು. 

ಲೆಕ್ಕ ಪರಿಶೋಧಕ ಡಾ. ಅಥಣಿ ವೀರಣ್ಣ ಮುಂತಾದ ಅನೇಕ ಗಣ್ಯರು ಆಗಮಿಸಿದ್ದರು. 

ಅತ್ಯಾಧುನಿಕವಾದ ತಂತ್ರಜ್ಞಾನದೊಂದಿಗೆ ವಿದ್ಯುತ್ ಬಳಕೆಯ ದಾಖಲೆಯನ್ನು ನಿಖರವಾಗಿ ಒದಗಿಸುವ ಈ ಸ್ಮಾರ್ಟ್ ಎನರ್ಜಿ ಮೀಟರ್  ಭವಿಷ್ಯದ ತಲೆಮಾರಿನ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಕೆಗೂ ಸಹಾ ಸೂಕ್ತವಾಗಿದ್ದು, ವಿದ್ಯುತ್ ಮಿತ ಬಳಕೆಗೆ ಸಹಾಯಕವಾಗುವ ಇದು ದುರ್ಬಳಕೆ ಹಾಗೂ ಅನಾವಶ್ಯಕ ಬಳಕೆಯನ್ನು ಪರೋಕ್ಷವಾಗಿ ನಿಯಂತ್ರಿಸಲಿದೆ.  

ಸೂಪರ್ ಮ್ಯಾಕ್ಸ್ ಕಾಂಪೋನೆಂಟ್ಸ್
ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರುಗಳಾದ ಅಂಜೂ ಆರಾಧ್ಯ ಬಹದ್ದೂರ್, ಮಲ್ಲೋಕಾರಾಧ್ಯ, ರೂಪಾ ಆರಾಧ್ಯ, ರೋಹಿತ್ ಬಹದ್ದೂರ್,  ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್ ಮತ್ತು ಇತರರು ಆಗಮಿಸಿದ್ದರು.

ಲೆಕ್ಕಪರಿಶೋಧಕ ಸಂಗಮೇಶ್ವರ ಹುರಕಡ್ಲಿ, ಆರ್ಕಿಟೆಕ್ಟ್ ಇಂಜಿನಿಯರ್ ಐ.ಪಿ. ಏಕೋ ರಾಮಾರಾಧ್ಯ, ಮಾಗನೂರು ಚಂದ್ರಶೇಖರ ಗೌಡ್ರು, ಸಾವನ್ ಅಂಬರ್‌ಕರ್ ಮುಂತಾದ ಗಣ್ಯರು ಆಗಮಿಸಿ ಶುಭ ಕೋರಿದರು.

error: Content is protected !!