ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾ
ದಾವಣಗೆರೆ, ಜ. 29 – ಕರ್ನಾಟಕದ ಮಧ್ಯಭಾಗದಲ್ಲಿ ರುವ ದಾವಣಗೆರೆಯಲ್ಲಿ ಮಕ್ಕಳ ಕೌಶಲ್ಯಾಭಿವೃದ್ಧಿ ಹಾಗೂ ನಾಗ ರಿಕ ಸೇವೆ (ಸಿವಿಲ್ ಸರ್ವೀಸ್) ತರಬೇತಿಗೆ ಆದ್ಯತೆ ನೀಡುವು ದಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ.
ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ವಾಹನ ಚಾಲನಾ ತರಬೇತಿ ಶಾಲೆ ಮಾಲೀಕರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬುಧವಾರ ಆ ಯೋಜಿಸಲಾಗಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದಿಂದ ಸ್ಥಾಪಿಸಲಾಗುವ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರ ವನ್ನು ದಾವಣಗೆರೆಯಲ್ಲಿ ಸ್ಥಾಪಿಸುವ ಚಿಂತನೆ ಇದೆ. ಪ್ರಸ್ತುತ ಬೆಂಗಳೂರಿನಲ್ಲಿ ಬಿಟ್ಟರೆ ರಾಜ್ಯದ ಯಾವ ಜಿಲ್ಲೆಯಲ್ಲೂ ಕೇಂದ್ರ ಕೌಶಲ್ಯ ತರಬೇತಿ ಕೇಂದ್ರವಿಲ್ಲ. ಮಧ್ಯ ಕರ್ನಾಟ ಕವಾದ ದಾವಣಗೆರೆಯಲ್ಲಿ ಈ ಕೇಂದ್ರ ಸ್ಥಾಪಿಸಿದರೆ ಹೆಚ್ಚು ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಬೇಕಾದ ಜಾಗ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸುವು ದಾಗಿ ಕೇಂದ್ರ ಸಚಿವರಿಗೆ ಹೇಳಿದ್ದೇವೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ನಾಗರಿಕ ಸೇವೆ (ಸಿವಿಲ್ ಸರ್ವೀಸ್) ಗೆ ಹೆಚ್ಚಿನ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಜಿಲ್ಲೆಯ ಲ್ಲಿಯೇ ಪ್ರವೇಶ ಪರೀಕ್ಷೆ ನಡೆಸಿ, 300 ಆಸಕ್ತ ವಿದ್ಯಾರ್ಥಿಗಳನ್ನು ಗುರುತಿಸಿ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ನಗರದ ದೃಶ್ಯ ಕಲಾ ಮಹಾ ವಿದ್ಯಾಲಯದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಬರುವ ಮಾರ್ಚ್ ತಿಂಗಳಲ್ಲಿ ಕ್ಯೂ ಸ್ಪೈಡರ್ ಕಂಪನಿಯವರಿಂದ ಜಿಲ್ಲೆಯ ಮಕ್ಕಳಿಗಾಗಿ ನಗರದಲ್ಲಿ ಉಚಿತ ತರಬೇತಿ ಕೊಡಿಸಲಾಗುವುದು. ಬೆಂಗಳೂರಿನಲ್ಲಿ ಕ್ಯೂ ಸ್ಪೈಡರ್ ಕಂಪನಿಯಿಂದ ತರಬೇತಿ ಪಡೆಯಬೇಕಾದರೆ ಕನಿಷ್ಟ 40 ಸಾವಿರ ರೂ. ಶುಲ್ಕ ನೀಡಬೇಕು ಹಾಗೂ ವಸತಿಗೆ ಹಣ ವ್ಯಯಿಸಬೇಕಾಗುತ್ತದೆ. ಆದರೆ ದಾವಣಗೆರೆಯಲ್ಲಿ ಸಂಪೂರ್ಣ ಉಚಿತವಾಗಿ ತರಬೇತಿ ನೀಡಲಾಗುವುದು. ಆಸಕ್ತರು ಭಾಗವಹಿಸಿ ಎಂದು ಕರೆ ನೀಡಿದರು.
ಇಂದಿನಿಂದಲೇ ತನ್ನ ಜವಾಬ್ದಾರಿಗೆ ಆದ್ಯತೆ ನೀಡುತ್ತೇನೆ. ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳತ್ತೇನೆ ಎಂದು ಸಂಕಲ್ಪ ಮಾಡಿರಿ. ನಿತ್ಯದ ದಿನಚರಣೆಯಲ್ಲಿ ಯಾವುದಕ್ಕೆ ಆದ್ಯತೆ ನೀಡಬೇಕೆಂದು ನಿರ್ಧರಿಸಿಕೊಳ್ಳಿ. ಮೊಬೈಲ್ ನಿಮ್ಮ ಬೆಸ್ಟ್ ಫ್ರೆಂಡ್ ಆಗದಿರಲಿ ಎಂದು ಸಂಸದರು, ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಂಚಾರಿ ನಿಯಮ ಪಾಲಿಸುವಲ್ಲಿ ಸ್ವಯಂ ಪ್ರೇರಿತ ಬದಲಾವಣೆ ಅಗತ್ಯವಿದೆ. ತಪ್ಪು ಮಾಡುವುದಿಲ್ಲ. ನಿಯಮ ಮೀರುವುದಿಲ್ಲ ಎಂದು ಸಂಕಲ್ಪ ಮಾಡಿಕೊಳ್ಳಿ. ಹೊರ ದೇಶದ ಜನತೆ ಪಾಲಿಸುವಂತೆ ಇಲ್ಲಿಯೂ ಶಿಸ್ತು ಪಾಲನೆ ಅಗತ್ಯ ಎಂದರು.
ಸಾಮಾಜಿಕ ಜವಾಬ್ದಾರಿಯೂ ಅಗತ್ಯವಾಗಿದ್ದು, ರಕ್ತದಾನ, ವನ ಮಹೋತ್ಸವದಂತಹ ಕಾರ್ಯಕ್ರಮ ಗಳಲ್ಲಿ ಪಾಲ್ಗೊಳ್ಳಿ. ಇದರಿಂದ ಸಹೋದರತ್ವ ಬೆಳೆ ಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಏಕನಾಥ್ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಮಂಜುನಾಥ, ಜಂಟಿ ಸಾರಿಗೆ ಆಯುಕ್ತ ಭೀಮನಗೌಡ ಪಾಟೀಲ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಎಸ್. ಪ್ರಮುತೇಶ್, ವಾಹನ ಚಾಲನಾ ತರಬೇತಿ ಸಂಸ್ಥೆ ಅಧ್ಯಕ್ಷ ಫಯಾಜ್ ಅಹಮ್ಮದ್ ಮತ್ತಿತರರಿದ್ದರು. ಮಂಜುನಾಥ್ ಸ್ವಾಗತಿಸಿದರು. ಕು.ಜೀವಿತಾ ಪ್ರಾರ್ಥಿಸಿದರು.